Search This Blog

Powered by Blogger.
  • ()

Labels

ಹೆಮ್ಮಯ ಕನ್ನಡತಿ ಪೂರ್ಣಿಮಾ ಹೆಗಡೆ

Share it Please

                           ಪೂರ್ಣಿಮಾ ಹೆಗಡೆ 

                   ಹೆಮ್ಮಯ ಕನ್ನಡತಿ ಪೂರ್ಣಿಮಾ ಹೆಗಡೆ 

 ಇಂದಿನ ತಂತ್ರಜ್ಞಾನ ಯುಗದಲ್ಲಿ ಭಾರತ ತನ್ನ ಸೈಕ್ಷಣಿಕ ತಂತ್ರಜ್ಞಾನದಲ್ಲಿ ಮುಂದೆ ಮುನ್ನುಗ್ಗುತ್ತಿರುವ ರಾಷ್ಟ್ರವಾಗಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್, ಇನ್ನು ಇತರೆ ಡಿಜಿಟಲ್ ಸಾಧನಗಳ ಮೂಲಕ ಶಿಕ್ಷಣವನ್ನು ಸಾಮಾನ್ಯ ಮಕ್ಕಳಿಗೆ ಕೊಡಲಾಗುತ್ತದೆ ಸಾಧನೆ ಮಾಡಲಾಗಿದೆ. ಈ ಸಾಧನೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ನವತಂತ್ರಜ್ಞಾನದೊಂದಿಗೆ ಹೊಸ ಆಯಾಮಗಳನ್ನು ತೆರೆದಿದೆ. ಆದರೆ ಈ ತಂತ್ರಜ್ಞಾನದ ಬೆಳವಣಿಗೆಯ ನಡುವೆ, ನಮ್ಮ ಆಧುನಿಕ ಪೀಳಿಗೆ ನಮ್ಮ ಸಂಸ್ಕೃತಿ, ಭಾಷೆ, ಪರಂಪರೆ, ಅಚ್ಚುಮೆಚ್ಚಿನ ಮೌಲ್ಯಗಳನ್ನು ನಷ್ಟವಾಗಿಸುತ್ತಿರುವುದೂ ಒಂದು ಸಂಕಟಕರ ಸತ್ಯವಾಗಿದೆ.

              ಸೋಷಿಯಲ್ ಮೀಡಿಯಾದ ಜಗತ್ತಿನಲ್ಲಿ ಭಾಷೆಯ ಶುದ್ಧತೆ, ಪಾಠದ ಉದ್ದೇಶ, ಸಂಸ್ಕೃತಿಯ ಅರಿವು – ಎಲ್ಲವೂ ಹಿಮ್ಮೆಟ್ಟುತ್ತಿರುವಾಗಲೇ(ಮರೆಯುತ್ತಿದ್ದಿವೆ ), ಕೆಲವರ ನಿಸ್ವಾರ್ಥ ಸೇವೆ ಮತ್ತು ನಿಷ್ಠುರ ಕಾಯಕವು ಈ ಭದ್ರತೆಯೊಳಗಿನ ಬೆಳಕಾಗುತ್ತಿದೆ. ಇಂತಹ ಕನ್ನಡದ ದೀಪ ಬೆಳಗಿಸುತ್ತಿರುವವರಲ್ಲಿ ಮೊದಲನೆ ಪಟ್ಟಿಯಲ್ಲಿ ನಿಲ್ಲಿಸ ಬಹುದಾದ ವ್ಯಕ್ತಿ ಯಾರು ಅಂದರೆ ಅವರೇ ನಮ್ಮ ಹೆಮ್ಮೆಗೆಯ ಪಾತ್ರವಾಗಿರುವ ಕನ್ನಡತಿಯಾದ ಪೂರ್ಣಿಮಾ ಹೆಗಡೆ.

 ಪೂರ್ಣಿಮಾ ಹೆಗಡೆ ಅವರು ಮೂಲತಃ ಶಾಲೆಯ ಪ್ರಾಚಾರ್ಯರಾಗಿದ್ದು, ತಮ್ಮ ವೃತ್ತಿಜೀವನದ ಜೊತೆಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಮರ್ಪಿತವಾಗಿದ್ದಾರೆ. ಅವರು ತಮ್ಮ ದಿನನಿತ್ಯದ ಕರ್ತವ್ಯಗಳಲ್ಲಿ ಎಷ್ಟೇ ಬಿಕ್ಕಟ್ಟು ಇದ್ದರೂ, ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದುಗರಿಗೆ ಪರಿಚಯಿಸುತ್ತಿದ್ದಾರೆ. ವಿಶೇಷವೆಂದರೆ, ಈ ಪರಿಚಯ ಸಾದಾ ಶೈಲಿಯಲ್ಲಿ ನಡೆಯದು. ಅವರು ಪುಸ್ತಕದ ವಿಷಯವನ್ನು ಜನಪದ ಗಾದೆ, ಹಾಡುಗಳ ಶೈಲಿ, ಕಥೆಗಳ ರೂಪದಲ್ಲಿ ಮನಮುಟ್ಟುವ ರೀತಿಯಲ್ಲಿ ಕೇಳುಗರಿಗೆ ತಿಳಿಸುತ್ತಾರೆ. ಅವರ ದಾಟಿಮೂಲಕ ಅವರ ಧ್ವನಿ ಏನೋ ವಿಶಿಷ್ಟತೆಯಿದೆ ಅದು ಸರಳವಾಗಿದ್ದು ಸಹಜವಾಗಿ ಮನಸ್ಸನ್ನು ತಲುಪುತ್ತದೆ.

 ಈ ರೀತಿಯ ಕಾರ್ಯವು ಇಂದಿನ ತಲೆಮಾರಿಗೆ ಬಹಳ ಅಗತ್ಯವಾದದ್ದು. ಓದು ಕುಗ್ಗುತ್ತಿರುವ ಈ ಕಾಲದಲ್ಲಿ, ಪುಟಪುಟೆ ಓದುವ ಅಭ್ಯಾಸವನ್ನು ಕನ್ನಡದಲ್ಲಿ ಬೆಳೆಸುತ್ತಿರುವುದು ಅಪರೂಪ. ಪುಟ್ಟಪುಟ್ಟ ಲೇಖಕರಿಗೆ, ಸಾಹಿತ್ಯದಲ್ಲಿ ಹೊಸದಾಗಿ ಕಾಲಿಟ್ಟವರಿಗೆ ಪ್ರೋತ್ಸಾಹ ನೀಡುವುದು, ಅವರ ಕೆಲಸವನ್ನು ಗುರುತಿಸುವುದು, ಅವರ ಬರಹವನ್ನು ಓದುಗರಿಗೆ ತಲುಪಿಸುವುದು – ಈ ಎಲ್ಲಾ ಕಾರ್ಯಗಳನ್ನು ಪೂರ್ಣಿಮಾ ಹೆಗಡೆ ಅವರು ಮಾಡುತ್ತಿದ್ದಾರೆ.

 ಅವರು ಓದುಗಾರರನ್ನು ಬರವಣಿಗೆಯತ್ತ ಹೋಲಿಸುತ್ತಾರೆ. ಬರಹದ ಹಿಂದೆ ಇರುವ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಕಾದಂಬರಿಗಳನ್ನು ಪರಿಚಯಿಸುತ್ತಾರೆ, ಲಘುಕಥೆಗಳನ್ನು ವಿಶ್ಲೇಷಿಸುತ್ತಾರೆ, ಕವಿತೆಗಳ ತಾತ್ಪರ್ಯಗಳನ್ನು ಚರ್ಚಿಸುತ್ತಾರೆ. ಈ ಮೂಲಕ ಓದುಗಾರರಲ್ಲಿ ವಿಮರ್ಶಾತ್ಮಕ ಚಿಂತನೆ, ಭಾಷೆಯ ಪ್ರೀತಿಯನ್ನು ಬೆಳೆಸುತ್ತಿದ್ದಾರೆ. ಇಷ್ಟರಲ್ಲಿಯೂ ಮುಖ್ಯವಾದ ವಿಷಯವೆಂದರೆ, ಅವರು ಈ ಎಲ್ಲಾ ಕಾರ್ಯಗಳನ್ನು ನಿರೀಕ್ಷೆ ಇಲ್ಲದೆ, ನಿಷ್ಕಲ್ಮಷವಾಗಿ, ಒಬ್ಬ ನಿಷ್ಠಾವಂತ ಕನ್ನಡ ಪ್ರೇಮಿ ಎಂಬ ಬಲದಿಂದ ಮುಂದುವರೆಸುತ್ತಿದ್ದಾರೆ.

 ಪೂರ್ಣಿಮಾ ಹೆಗಡೆ ಅವರ ಈ ಸಾಹಸವು ನಮ್ಮ ಭಾಷೆಗೆ ನೂತನ ಶಕ್ತಿ ತುಂಬುತ್ತಿದೆ. ಅವರು ಪಾಠ್ಯಪುಸ್ತಕಗಳಲ್ಲಿ ಸಿಕ್ಕದ ನೈಜ ಬದುಕಿನ ಪಾಠಗಳನ್ನು ಓದುಗರಿಗೆ ಕಲಿಸುತ್ತಿದ್ದಾರೆ. ಪ್ರತಿಯೊಬ್ಬ ಕನ್ನಡ ಓದುಗಾರನು, ಪ್ರೇಮಿ, ಲೇಖಕನು ಇವರ ಕೆಲಸದಿಂದ ಪ್ರೇರಿತನಾಗುತ್ತಿದ್ದಾನೆ.

 ಇತ್ತೀಚಿನ ದಿನಗಳಲ್ಲಿ ಹಲವಾರು ಯುವ ಲೇಖಕರು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹವನ್ನು ಪ್ರಕಟಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಪೂರ್ಣಿಮಾ ಹೆಗಡೆ ಅವರಂತಹ ಹಿರಿಯರು ಇವರಿಗೆ ಮಾರ್ಗದರ್ಶನ ನೀಡುವುದು, ಅವರ ಬರಹವನ್ನು ಪ್ರೋತ್ಸಾಹಿಸುವುದು ಅವಶ್ಯಕ. ಅವರು ತಾವೇ ಓದಿ, ಅನಿಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಹೃದಯದಿಂದ ಬರಹವನ್ನು ಅರ್ಥಮಾಡಿಕೊಳ್ಳುತ್ತಾರೆ. ಇದು ಓದುಗಾರನಿಗೆ ಓದುವ ಹವ್ಯಾಸವನ್ನೇ ಅಲ್ಲ, ಆತ್ಮಸಾಕ್ಷಾತ್ಕಾರವನ್ನೂ ನೀಡುತ್ತದೆ.

 ಈ ಎಲ್ಲಾ ಕಾರಣಗಳಿಂದಾಗಿ ಪೂರ್ಣಿಮಾ ಹೆಗಡೆ ಅವರನ್ನು ಕೇವಲ ಶಿಕ್ಷಕಿ ಎಂದು ಮಾತ್ರವಲ್ಲ, ಸಮಾಜದಲ್ಲಿ ಭಾಷಾ ಕಾರ್ಯಕರ್ತೆ, ಓದು ಪ್ರಚಾರಕರ್ತಿ, ಹಾಗೂ ಸಾಹಿತ್ಯದ ಸೇವೆಗೈಯುವ ಕನ್ನಡತಿಯಾದ ವ್ಯಕ್ತಿ ಎಂದು ಗುರುತಿಸಬಹುದಾಗಿದೆ. ಅವರ ಜೀವನವು ನಾವೆಲ್ಲರೂ ಶೇಖರಿಸಬಹುದಾದ ಮಾದರಿಯಾಗಿದೆ. ಅವರ ಕೆಲಸಗಳಿಗೆ ಗೌರವ ಸಲ್ಲಿಸುವುದು, ಬೆನ್ನುತಟ್ಟುವುದು, ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

 ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮ ಶ್ರದ್ಧಾ ಮತ್ತು ಪ್ರೀತಿಯಿಂದ ಸೇವೆ ಸಲ್ಲಿಸುತ್ತಿರುವ ಪೂರ್ಣಿಮಾ ಹೆಗಡೆ ಅವರಿಗೆ ಹೃತ್ಪೂರ್ವಕ ವಂದನೆಗಳು ಮತ್ತು ಅಭಿನಂದನೆಗಳು. ಇಂತಹ ವ್ಯಕ್ತಿಗಳು ನಾವು ಭಾಷೆಯನ್ನು ಉಳಿಸಿಕೊಂಡು ಹೋಗಬೇಕಾದುದೆಂಬ ಕರ್ತವ್ಯವನ್ನು ಕಿವಿಮಾತಾಗಿ ನೆನಪಿಸುತ್ತಾರೆ.


Written by

We are Creative Blogger Theme Wavers which provides user friendly, effective and easy to use themes. Each support has free and providing HD support screen casting.

0 comments:

Post a Comment

© 2013 HARIVU HABBA . All rights resevered. Designed by Templateism