ಪೀಠಿಕೆ
ವಿದ್ಯಾಭ್ಯಾಸ ಎಂಬುದು ಕೇವಲ ಪಾಠ ಹೇಳುವಿಕೆಯಿಂದಲೇ ಸೀಮಿತವಲ್ಲ. ಅದು ವ್ಯಕ್ತಿಯ ಬುದ್ಧಿ, ಭಾವನೆ, ನಡವಳಿಕೆ, ಕೌಶಲ್ಯಗಳ ಸರ್ವತೋಮುಖ ಬೆಳವಣಿಗೆಗಾಗಿ ಮಾಡಲ್ಪಡುವ ಕ್ರಿಯೆಯಾಗಿದೆ. ಶಿಕ್ಷಣದ ಗುರಿಗಳನ್ನು ನಿರ್ಧರಿಸುವಲ್ಲಿ ಶೈಕ್ಷಣಿಕ ಮನೋವಿಜ್ಞಾನ ಮಹತ್ವಪೂರ್ಣ ಪಾತ್ರವಹಿಸುತ್ತದೆ. ಮಾನವನ ಮನಸ್ಸಿನ ಕಾರ್ಯವಿಧಾನಗಳನ್ನು ತಿಳಿದು, ಶಿಕ್ಷಣದ ಉದ್ದೇಶಗಳನ್ನು ರೂಪಿಸಲಾಗುತ್ತದೆ. ಇದರಲ್ಲಿ ಅತ್ಯಂತ ಪ್ರಮುಖವಾಗಿರುವುದೇ ಜ್ಞಾನಾತ್ಮಕ ಗುರಿಗಳು (Cognitive Objectives)
ಜ್ಞಾನಾತ್ಮಕ ಗುರಿಗಳ ಅರ್ಥ
ಜ್ಞಾನಾತ್ಮಕ ಗುರಿಗಳು ವಿದ್ಯಾರ್ಥಿಯ ಅರಿವು, ತಿಳುವಳಿಕೆ, ಅನ್ವಯ, ವಿಶ್ಲೇಷಣೆ, ಸಂಶ್ಲೇಷಣೆ ಮತ್ತು ಮೌಲ್ಯಮಾಪನ ಚಟುವಟಿಕೆಗಳಿಗೆ ಸಂಬಂಧಿಸಿದ ಗುರಿಗಳಾಗಿವೆ. ಈ ಗುರಿಗಳು ವಿದ್ಯಾರ್ಥಿಯ ಬೌದ್ಧಿಕ ಬೆಳವಣಿಗೆಗೆ ದಾರಿ ಮಾಡಿಕೊಡುತ್ತವೆ.
ಶಿಕ್ಷಣ ತಜ್ಞ ಬ್ಲೂಮ್ (Bloom) ಅವರು ಈ ಜ್ಞಾನಾತ್ಮಕ ಗುರಿಗಳನ್ನು ಕ್ರಮಬದ್ಧವಾಗಿ ಹೀಗಾಗಿ ವಿಂಗಡಿಸಿದ್ದಾರೆ:
1. ಜ್ಞಾನ (Knowledge)
ಇದು ಪ್ರಾಥಮಿಕ ಹಂತ. ವಿದ್ಯಾರ್ಥಿ ಯಾವುದೇ ವಿಷಯದ ಮೂಲಭೂತ ಮಾಹಿತಿಯನ್ನು ನೆನಪಿನಲ್ಲಿ ಇರಿಸಿಕೊಳ್ಳುವ ಶಕ್ತಿ ಹೊಂದಿರಬೇಕು.
ಉದಾಹರಣೆ:
ತಾತ್ವಿಕತೆಯ ಪಾಠದಲ್ಲಿ "ಮಾನವೀಯ ಮೌಲ್ಯಗಳು ಯಾವುವು?" ಎಂಬ ಪ್ರಶ್ನೆಗೆ ಉತ್ತರಿಸಬೇಕು. ಗಣಿತದಲ್ಲಿ ಸೂತ್ರಗಳನ್ನು ಜ್ಞಾಪಿಸಿಕೊಳ್ಳುವುದು.
ಪದಗಳು, ನಿಯಮಗಳು, ಸೂತ್ರಗಳು ಮುಂತಾದ ಸ್ಮರಶುವಿಕೆಗೆ ಜ್ಞಾನ ಆಧಾರ ವಾಗಿದೆ
2. ತಿಳುವಳಿಕೆ (Comprehension)
ವಿದ್ಯಾರ್ಥಿ ಅರಿತ ಮಾಹಿತಿಯ ಅರ್ಥವನ್ನು ಗ್ರಹಿಸಬೇಕು. ವಿಷಯದ ಹಿನ್ನೆಲೆ ತಿಳಿದು, ಸರಿಯಾದ ಅರ್ಥೈಸುವಿಕೆಯನ್ನು ಬೆಳೆಸಬೇಕು.
ಉದಾಹರಣೆ:
- ಉದಾಹರಣೆ ನೀಡುವಿಕೆ.
- ಸಂಬಂಧ ಕಲ್ಪಿಸುವಿಕೆ.
- ತಾಳೆ ನೋಡುವುದು.
- ವಿವರಣೆ ನೀಡುವನು
- ಪಾಠದ ಸಾರಾಂಶ ಹೇಳುವುದು.
3. ಅನ್ವಯ (Application):
ವಿದ್ಯಾರ್ಥಿ ತಿಳಿದ ಮಾಹಿತಿಯನ್ನು ಹೊಸ ಪರಿಸ್ಥಿತಿಗಳಲ್ಲಿ ಅನ್ವಯಿಸಬಲ್ಲ ಶಕ್ತಿ ಹೊಂದಿರಬೇಕು.
ಉದಾಹರಣೆ:
- ಗಣಿತದ ಸೂತ್ರ ಬಳಸಿ ಸಮಸ್ಯೆ ಪರಿಹರಿಸುವುದು.
- ಭಾಷಾ ಪಾಠದ ಶೈಲಿಯಲ್ಲಿ ಹೊಸ ಸಂವಾದ ಬರೆಯುವುದು.
- ತರ್ಕಿಸುವುದು
- ಊವಿಸುವಿಕೆ
4. ವಿಶ್ಲೇಷಣೆ (Analysis)
ಇದು ವಿಚಾರಗಳನ್ನು ವಿಭಾಗಿಸಿ, ವ್ಯತ್ಯಾಸ ತಿಳಿದು, ಕಾರಣದ ಬೆನ್ನುಹತ್ತುವ ಹಂತ. ವಿಶ್ಲೇಷಣಾತ್ಮಕ ಚಿಂತನಶೀಲತೆಯನ್ನು ಉತ್ತೇಜಿಸುತ್ತದೆ.
ಉದಾಹರಣೆ:
- ಕಥಾನಕದ ಪಾತ್ರಗಳ ವೈಶಿಷ್ಟ್ಯಗಳನ್ನು ಹೋಲಿಕೆ ಮಾಡುವುದು.
- ವೈಜ್ಞಾನಿಕ ಪ್ರಯೋಗದ ಹಂತಗಳನ್ನು ವಿವರಿಸುವುದು.
5. ಸಂಶ್ಲೇಷಣೆ (Synthesis)
ಇದು ಅರ್ಥಪೂರ್ಣ ಹೊಸವಾದದನ್ನು ಸೃಜಿಸುವ ಹಂತ. ವಿದ್ಯಾರ್ಥಿ ವಿವಿಧ ಮಾಹಿತಿಗಳನ್ನು ಸಂಯೋಜಿಸಿ ಹೊಸ ಪರಿಹಾರ, ಬರಹ ಅಥವಾ ಉತ್ಪನ್ನ ಸೃಷ್ಟಿಸಬೇಕು.
ಉದಾಹರಣೆ:
- ನಾಟಕದ ಹೊಸ ಅಂತ್ಯ ರಚನೆ.
- ಲೇಖನ ಬರೆಯುವುದು.
6. ಮೌಲ್ಯಮಾಪನ (Evaluation):
ಇದು ಅತ್ಯಂತ ಉನ್ನತ ಹಂತ. ವಿದ್ಯಾರ್ಥಿ ವಿಷಯದ ಕುರಿತು ತಾನು ಆಲೋಚಿಸಿ, ತತ್ವಾಧಾರಿತ ಅಭಿಪ್ರಾಯ ರೂಪಿಸಬೇಕು.
ಉದಾಹರಣೆ:
- ಪಾಠದ ನಾಯಕನ ತೀರ್ಮಾನ ಸರಿಯಾಗಿತ್ತೆ?" ಎಂಬುದರ ಬಗ್ಗೆ ಚರ್ಚೆ.
- ಒಂದಕ್ಕಿಂತ ಹೆಚ್ಚು ಪರಿಹಾರ ನೀಡಿದಾಗ ಯಾವುದು ಉತ್ತಮ ಎನ್ನುವುದನ್ನು ನಿರ್ಧರಿಸುವುದು.
ಶಿಕ್ಷಣದ ಗುರಿಗಳ ಮಹತ್ವ
ಜ್ಞಾನಾತ್ಮಕ ಗುರಿಗಳ ಈ ಕ್ರಮ ವಿದ್ಯಾರ್ಥಿಗೆ ಕೇವಲ ಮಾಹಿತಿ ಕಲಿಸುವುದಲ್ಲ, ಬದಲಿಗೆ ವಿಚಾರಶೀಲತೆ, ನಾವೀನ್ಯತೆ, ವಿವೇಕ ಹಾಗೂ ವೈಯಕ್ತಿಕ ಅಭಿವ್ಯಕ್ತಿ ಬೆಳೆಯಲು ಸಹಾಯ ಮಾಡುತ್ತದೆ. ಈ ಗುರಿಗಳನ್ನು ದೈನಂದಿನ ಪಾಠ ಯೋಜನೆಗಳಲ್ಲಿ ಸೇರಿಸಿ ಕಲಿಕೆಯ ಉದ್ದೇಶ ಸ್ಪಷ್ಟವಾಗುವಂತೆ ಮಾಡಬಹುದು.
ಉಪಸಂಹಾರ
ಮನೋವಿಜ್ಞಾನದಲ್ಲಿ ಶಿಕ್ಷಣದ ಗುರಿಗಳನ್ನು ಹೇಗೆ ರೂಪಿಸಬೇಕು ಎಂಬ ಪ್ರಶ್ನೆಗೆ ಬ್ಲೂಮ್ ನೀಡಿದ ಜ್ಞಾನಾತ್ಮಕ ಗುರಿಗಳ ಕ್ರಮ ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ಜ್ಞಾನ → ತಿಳುವಳಿಕೆ → ಅನ್ವಯ → ವಿಶ್ಲೇಷಣೆ → ಸಂಶ್ಲೇಷಣೆ → ಮೌಲ್ಯಮಾಪನ ಎಂಬ ಕ್ರಮದ ಮೂಲಕ ನಾವು ವಿದ್ಯಾರ್ಥಿಯ ಬೌದ್ಧಿಕ ಬೆಳವಣಿಗೆಗೆ ದಾರಿಯಾಗಬಹುದಾಗಿದೆ. ಇಂತಹ ಶಿಕ್ಷಣವು ಮಾತ್ರ ನಿಜವಾದ ಅರ್ಥದಲ್ಲಿ ಸಂಪೂರ್ಣ ವ್ಯಕ್ತಿತ್ವವನ್ನು ನಿರ್ಮಿಸಬಲ್ಲದು.
ನೋಟ್ಸ್ ನಲ್ಲಿ ಏನಾದರು ಗೊಂದಲಗಳು, ಪ್ರಶ್ನೆಗಳು ಇದ್ದರೆ ಕಾಮೆಂಟ್ ಮೂಲಕ ತಿಳಿಸಿ ಹಾಗೆ ನಿರಂತರ ನೋಟ್ಸ್, ಕ್ವಿಜ ಗಾಗಿ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ 👇
https://t.me/+xtZZlsxoCIIwNjk9
0 comments:
Post a Comment