ಕಂಪ್ಯೂಟರ್ ಇಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇವತ್ತು ನಾವು ಬಳಸುತ್ತಿರುವ ಆಧುನಿಕ ಕಂಪ್ಯೂಟರ್‌ಗಳು ಹೀಗೆ ತಕ್ಷಣ ಬಂದಿಲ್ಲ. ಹಲವು ವರ್ಷಗಳ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ,ಮಾಡುತ್ತಾ ಮೂಲಕ ಬಂದಿದೆ ಹಾಗೂ ಅನೇಕ ವಿಜ್ಞಾನಿಗಳ ಪರಿಶ್ರಮದಿಂದ ಹಂತ ಹಂತವಾಗಿ ಇಂದಿನ ಮಟ್ಟಕ್ಕೆ ಬಂದಿವೆ. ಕಂಪ್ಯೂಟರ್‌ನ ಬೆಳವಣಿಗೆಯನ್ನು ತಲೆಮಾರುಗಳು (Generations) ಎಂದು ವಿಭಾಗಿಸಲಾಗಿದೆ. ಪ್ರತಿ ತಲೆಮಾರಿಗೂ ಅದರದೇ ಆದ ವಿಶೇಷತೆಗಳು ಮತ್ತು ತಂತ್ರಜ್ಞಾನಗಳಿವೆ.
1. ಪ್ರಥಮ ತಲೆಮಾರಿ (1940–1956) – ವ್ಯಾಕ್ಯೂಮ್ ಟ್ಯೂಬ್ ಆಧಾರಿತ
- ತಂತ್ರಜ್ಞಾನ: ವ್ಯಾಕ್ಯೂಮ್ ಟ್ಯೂಬ್‌ಗಳು ಉಪಯೋಗ.
- ಗಾತ್ರ: ಬಹಳ ದೊಡ್ಡದು, ಒಂದು ಕೋಣೆಯಷ್ಟಿತ್ತು.
- ವೇಗ: ನಿಧಾನ, ತಾಪಮಾನ ಹೆಚ್ಚಾಗುತ್ತಿತ್ತು.
- ಉದಾಹರಣೆ: ENIAC, UNIVAC.
- ಉಪಯೋಗ: ಸೇನಾ ಲೆಕ್ಕಾಚಾರ, ವೈಜ್ಞಾನಿಕ ಗಣನೆ.
2. ದ್ವಿತೀಯ ತಲೆಮಾರಿ (1956–1963) – ಟ್ರಾನ್ಸಿಸ್ಟರ್ ಆಧಾರಿತ
- ತಂತ್ರಜ್ಞಾನ: ಟ್ರಾನ್ಸಿಸ್ಟರ್‌ಗಳು ಬಳಕೆ.
- ಗಾತ್ರ: ಚಿಕ್ಕದಾಯಿತು, ವಿದ್ಯುತ್ ವ್ಯಯ ಕಡಿಮೆಯಾಯಿತು.
- ವೇಗ: ವೇಗ ಹೆಚ್ಚಾಯಿತು, ತಾಪಮಾನ ಕಡಿಮೆ.
- ಉದಾಹರಣೆ: IBM 1401, CDC 1604.
- ಉಪಯೋಗ: ಬ್ಯಾಂಕಿಂಗ್, ಉದ್ಯಮ, ಸರ್ಕಾರಿ ಕಚೇರಿಗಳು.
3. ತೃತೀಯ ತಲೆಮಾರಿ (1964–1971) – ಇಂಟಿಗ್ರೇಟೆಡ್ ಸರ್ಕ್ಯೂಟ್ (IC) ಆಧಾರಿತ
- ತಂತ್ರಜ್ಞಾನ: IC ಚಿಪ್‌ಗಳು ಬಳಕೆ.
- ಗಾತ್ರ: ಇನ್ನೂ ಚಿಕ್ಕದಾಯಿತು, ಸಾಮರ್ಥ್ಯ ಹೆಚ್ಚಾಯಿತು.
- ವೇಗ: ಸಾವಿರಾರು ಲೆಕ್ಕಾಚಾರಗಳನ್ನು ಪ್ರತಿ ಸೆಕೆಂಡ್ ಮಾಡಬಲ್ಲದು.
- ಉದಾಹರಣೆ: IBM 360 Series.
- ಉಪಯೋಗ: ಸಂಶೋಧನೆ, ಶಿಕ್ಷಣ, ವ್ಯಾಪಾರ.
4. ಚತುರ್ಥ ತಲೆಮಾರಿ (1971–1980) – ಮೈಕ್ರೋಪ್ರೊಸೆಸರ್ ಆಧಾರಿತ
- ತಂತ್ರಜ್ಞಾನ: ಮೈಕ್ರೋಪ್ರೊಸೆಸರ್‌ಗಳು ಬಳಕೆ.
- ಗಾತ್ರ: ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ರೂಪದಲ್ಲಿ.
- ವೇಗ: ಬಹಳ ವೇಗ, ಕಡಿಮೆ ವೆಚ್ಚ.
- ಉದಾಹರಣೆ: Apple II, IBM PC.
- ಉಪಯೋಗ: ಕಚೇರಿ, ಮನೆ, ಶಾಲೆಗಳಲ್ಲಿ ವ್ಯಾಪಕ ಬಳಕೆ.
- ತಂತ್ರಜ್ಞಾನ: Artificial Intelligence (AI), Machine Learning, Quantum Computing.
- ವೇಗ: ಅತ್ಯಂತ ವೇಗ, ಹೆಚ್ಚಿನ ಸಂಗ್ರಹ ಸಾಮರ್ಥ್ಯ.
- ಉದಾಹರಣೆ: Supercomputers, AI-based Systems.
- ಉಪಯೋಗ: ಸ್ವಯಂ ಚಾಲಿತ ವಾಹನ, ಭಾಷಾಂತರ, ಆರೋಗ್ಯ ಕ್ಷೇತ್ರ, ಬಾಹ್ಯಾಕಾಶ ಸಂಶೋಧನೆ.
ಕೊನೆಮಾತು :
ಕಂಪ್ಯೂಟರ್‌ನ ಇತಿಹಾಸ ನಮಗೆ ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತದೆ ಎಂಬುದನ್ನು ತೋರಿಸುತ್ತದೆ. ವ್ಯಾಕ್ಯೂಮ್ ಟ್ಯೂಬ್‌ನಿಂದ ಪ್ರಾರಂಭವಾದ ಕಂಪ್ಯೂಟರ್‌ಗಳು ಇಂದು ಕೃತಕ ಬುದ್ಧಿಮತ್ತೆಯ ಹಂತ ತಲುಪಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನವೀನತೆಗಳನ್ನು ನಾವು ಕಾಣುವ ಸಾಧ್ಯತೆ ಇದೆ.
0 comments:
Post a Comment