ಕಂಪ್ಯೂಟರ್ (Computer) ಎಂಬ ಪದವು ಇಂಗ್ಲಿಷ್‌ನ Compute ಎಂಬ ಪದದಿಂದ ಬಂದಿದೆ. Compute ಅಂದರೆ ಲೆಕ್ಕ ಹಾಕುವುದು. ಹೀಗಾಗಿ, ಕಂಪ್ಯೂಟರ್ ಎಂದರೆ ಲೆಕ್ಕ ಹಾಕುವ ಯಂತ್ರ ಎಂದು ಅರ್ಥೈಸಬಹುದು. ಆದರೆ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಕೇವಲ ಲೆಕ್ಕ ಹಾಕುವುದಲ್ಲದೆ, ಡೇಟಾ ಸಂಗ್ರಹಿಸುವುದು, ಪ್ರಕ್ರಿಯೆಗೊಳಿಸುವುದು, ವಿಶ್ಲೇಷಿಸುವುದು, ಮಾಹಿತಿ ನೀಡುವುದು, ವಿನ್ಯಾಸ ರಚಿಸುವುದು, ಸಂವಹನ ನಡೆಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ವೇಗವಾಗಿ, ನಿಖರವಾಗಿ ನೆರವೇರಿಸುತ್ತದೆ.
ಕಂಪ್ಯೂಟರ್ ಒಂದು ಎಲೆಕ್ಟ್ರಾನಿಕ್ ಸಾಧನ. ಇದು ವಿದ್ಯುತ್ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ. ಇದು GIGO (Garbage In – Garbage Out) ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಅಂದರೆ ನೀವು ಸರಿಯಾದ ಮಾಹಿತಿ ನೀಡಿದರೆ ಸರಿಯಾದ ಫಲಿತಾಂಶ ನೀಡುತ್ತದೆ, ತಪ್ಪಾದ ಮಾಹಿತಿ ನೀಡಿದರೆ ತಪ್ಪಾದ ಫಲಿತಾಂಶ ನೀಡುತ್ತದೆ.
ಸರಳ ಅರ್ಥದಲ್ಲಿ :
ಕಂಪ್ಯೂಟರ ಎಂದರೆ ಸರಳ ಮತ್ತು ನಿಖರವಾಗಿ ಮಾಹಿತಿಯನ್ನು ಒದಗಿಸುವುದೇ ಕಂಪ್ಯೂಟರ್ ಅಥವಾ ಗಣಕಯಂತ್ರ ಎನ್ನುವರು ಉದಾಹರಣೆ : 2+1=3
ಈ ರೀತಿಯಾಗಿ ಸರಳವಾಗಿ ಮಾಹಿತಿಯನ್ನು ನೀಡಿವುದೇ ಕಂಪ್ಯೂಟರ.
ಕಂಪ್ಯೂಟರ್‌ನ ಪ್ರಮುಖ ಲಕ್ಷಣಗಳು:
1. ವೇಗ (Speed): ಅತ್ಯಂತ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯ.
2. ನಿಖರತೆ (Accuracy): ತಪ್ಪಿಲ್ಲದ ಲೆಕ್ಕಾಚಾರ ಮತ್ತು ಪ್ರಕ್ರಿಯೆ.
3. ಸಂಗ್ರಹ ಸಾಮರ್ಥ್ಯ (Storage Capacity): ಬಹಳ ಪ್ರಮಾಣದ ಡೇಟಾ ಸಂಗ್ರಹಿಸಬಹುದು.
4. ಬಹುಕಾರ್ಯ ನಿರ್ವಹಣೆ (Multitasking): ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡಬಹುದು.
5. ಸ್ವಯಂಚಾಲಿತ ಕಾರ್ಯ (Automation): ಪ್ರೋಗ್ರಾಮ್ ಪ್ರಕಾರ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ.
ಕಂಪ್ಯೂಟರ್‌ಗಳ ಇತಿಹಾಸ:
1. ಪ್ರಥಮ ತಲೆಮಾರಿ (1940–1956): ವ್ಯಾಕ್ಯೂಮ್ ಟ್ಯೂಬ್ ಆಧಾರಿತ.
2. ದ್ವಿತೀಯ ತಲೆಮಾರಿ (1956–1963): ಟ್ರಾನ್ಸಿಸ್ಟರ್ ಆಧಾರಿತ.
3. ತೃತೀಯ ತಲೆಮಾರಿ (1964–1971): ಇಂಟಿಗ್ರೇಟೆಡ್ ಸರ್ಕ್ಯೂಟ್ ಆಧಾರಿತ.
4. ಚತುರ್ಥ ತಲೆಮಾರಿ (1971–1980): ಮೈಕ್ರೋಪ್ರೊಸೆಸರ್ ಆಧಾರಿತ.
5. ಪಂಚಮ ತಲೆಮಾರಿ (1980ರಿಂದ ಇಂದಿನವರೆಗೂ): ಕೃತಕ ಬುದ್ಧಿಮತ್ತೆ ಆಧಾರಿತ.
ಕಂಪ್ಯೂಟರ್‌ನ ಭಾಗಗಳು:
1. ಹಾರ್ಡ್‌ವೇರ್ (Hardware): ಇನ್‌ಪುಟ್ ಸಾಧನಗಳು, ಔಟ್‌ಪುಟ್ ಸಾಧನಗಳು, CPU.
2. ಸಾಫ್ಟ್‌ವೇರ್ (Software): ಸಿಸ್ಟಮ್ ಸಾಫ್ಟ್‌ವೇರ್, ಅಪ್ಲಿಕೇಶನ್ ಸಾಫ್ಟ್‌ವೇರ್.
ಕಂಪ್ಯೂಟರ್‌ಗಳ ಪ್ರಕಾರ:
1. ಸೂಪರ್ ಕಂಪ್ಯೂಟರ್‌ಗಳು.
2. ಮೇನ್‌ಫ್ರೇಮ್ ಕಂಪ್ಯೂಟರ್‌ಗಳು.
3. ಮಿನಿ ಕಂಪ್ಯೂಟರ್‌ಗಳು.
4. ಮೈಕ್ರೋ ಕಂಪ್ಯೂಟರ್‌ಗಳು.
ಉಪಯೋಗಗಳು:
- ಶಿಕ್ಷಣ ರಂಗದಲ್ಲಿ ಉಪಯೋಗ
- ವಿಜ್ಞಾನ ಮತ್ತು ಸಂಶೋಧನೆ ಕೇಂದ್ರದಲ್ಲಿ ಉಪಯೋಗ
- ಆರ್ಥಿಕ ವ್ಯವಹಾರಗಳು ರಂಗದಲ್ಲಿ ಉಪಯೋಗ
- ವ್ಯಾಪಾರ ದಲ್ಲಿಯೂ ಉಪಯೋಗ
- ಮನರಂಜನೆ ರಂಗದಲ್ಲಿ ಕೂಡ ಉಪಯೋಗ
ಸಮಾರೂಪ :
ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಸರಿಯಾದ ಜ್ಞಾನದಿಂದ ನಾವು ಅದನ್ನು ಸಮರ್ಥವಾಗಿ ಬಳಸಬಹುದು.
ನೆಸ್ಟ್ ಅವಧಿಯಲ್ಲಿ ನಾವು ಕಂಪ್ಯೂಟರ್ ಪೀಳಿಗೆಗಳ ಸಂಪೂರ್ಣ ವಿವರಣೆ ನೋಡಣ
ಇದರಲ್ಲಿ ಏನಾದರು ತೊಂದರೆ ಪ್ರಶ್ನೆ ಇದ್ದರೆ ಜಿಮೈಲ್ ಮೂಲಕ ಫಾಲೋ ಮಾಡಿ ಕಾಮೆಂಟ್ ಮಾಡಿ.
0 comments:
Post a Comment