ಮಗು ಹುಟ್ಟಿನಿಂದ ಜೀವತ ಅವಧಿವರೆಗೆ ಆಗುವ ಬದಲಾವಣೆ ಆಧಾರಿಸಿ ನಾವು ಕೆಲವು ಹಂತಗಳು ನೋಡಬಹುದು.
ಮಾನವನ ವಿಕಾಸದ ಹಂತಗಳು:
ಈ ಮಾನವನ ವಿಕಾಸದ ಹಂತಗಳು ವರ್ಗಿಕರಿಸಿದವರು ಹರಲಾಕ ಎಲಿಜಿಬೆಟ್ ರವರು ಪ್ರಮುಖವಾಗಿ ಹತ್ತು ಬಗೆಯ ವರ್ಗಿಕರಿದ್ದಾರೆ ಅವು ಈ ಕೆಳಗಿಂತೆ ಕಾಣಬಹುದು.
ಹರಲಾಕ್ ಎಲಿಜಿಬೇಟ್ ವರ್ಗಿಕರಣ :
1.ಪ್ರಸವ ಪೂರ್ವ ಹಂತ(Prenatal Stage): ಗರ್ಭಧಾರಣೆಯಿಂದ ಜನನದ ತನಕ
2.ಶೈಶವ ಹಂತ (Infancy Stage): ಜನನದಿಂದ ಎರಡು ವಾರಗಳು.
3. ಹಸುಳೆತನ (Body Hood) : 3 ವಾರದಿಂದ 2 ವರ್ಷ.
4. ಪೂರ್ವ ಬಾಲ್ಯ ( Early Childhood ): 2 ರಿಂದ 6 ವರ್ಷ
5. ಉತ್ತರ ಬಾಲ್ಯ ( later Childhood ): 6 ರಿಂದ 12 ವರ್ಷ.
6. ಲೈಂಗಿಕ ಪಾಕ್ವತೆ ಹಂತ ( Property Period Stage): 12 ರಿಂದ 14 ವರ್ಷ.
7. ಪೂರ್ವ ತಾರುಣ್ಯವ್ಯಸ್ಥೆ ( Early Adolescence ) : 14 ರಿಂದ 16 ವರ್ಷ.
8.ಉತ್ತರ ತಾರುಣ್ಯವಸ್ಥೆ( letter Adolesensece): 16 ರಿಂದ 19 ವರ್ಷ.
9. ವಯಸ್ಕತನ ( Adult Wood ):19 ರಿಂದ 40 ವರ್ಷ.
10. ಮಧ್ಯ ವಯಸ್ಸು ( Middle Age): 40 ರಿಂದ 60 ವರ್ಷ.
11. ವೃದ್ದಾಪ್ಯಾ( Old Age): 60 ರಿಂದ ಸಾವಿನ ತನಕ
ಇವು ಹರಲಾಕ್ ರವರ ಪ್ರಮುಖ ವಿಕಾಸದ ಹಂತಗಳು ವಾಗಿವೆ.
ಅದರಲ್ಲಿ ಪ್ರಮುಖವಾಗಿ ಬಾಲ್ಯವ್ಯಸ್ಥೆ ಮತ್ತು ತಾರುಣ್ಯವಸ್ಥೆ ತಿಳಿದು ಕೊಳ್ಳೋಣ.
ತಾರುಣ್ಯವಸ್ಥೆ:
ತಾರುಣ್ಯವಸ್ಥೆವು ಇದು ಎರಡುರಿಂದ ಅನ್ನೆರಡು ವರ್ಷ ವರಗೆ ವ್ಯವಸ್ಥೆ ನೋಡಬಹುದು. ಈ ಅವಧಿಯನ್ನು ಶಾಲಾವಧಿ ಎಂದು ಕರುತ್ತಾರೆ ಇದರಲ್ಲಿ ಪ್ರಮುಖ ಎರಡು ಪ್ರಕಾರಗಳು ನೋಡಬಹುದು ಅವು ಈ ಕೆಳಗಿಂತಿವೆ.
- ಪೂರ್ವ ಬಾಲ್ಯವಸ್ಥೆ (2 ರಿಂದ 6 ವರ್ಷ )
- ಉತ್ತರ ಬಾಲ್ಯವಸ್ಥೆ (6 ರಿಂದ 12 ವರ್ಷ )
ಪೂರ್ವ ಬಾಲ್ಯವಸ್ಥೆಯ ದೈಹಿಕ ಬೆಳವಣಿಗೆ :
- ಈ ಹಂತದಲ್ಲಿ ಎತ್ತರವು ಮೂರು ರಷ್ಟು ಹೆಚ್ಚಾಗುತ್ತದೆ .
- ಶೈಶವಸ್ಥೆ ಗಿಂತ ಮೂರು ಪಟ್ಟು ತೂಕ ಹೆಚ್ಚಾಗುತ್ತದೆ.
- ದೈಹಿಕ ಬೆಳವಣಿಗೆ ನಿದಾನವಾಗುತ್ತದೆ.
- ಕೈ ಕಾಲು ಉದ್ದವಾಗಿದ್ದು ಉದರ ಚಪ್ಪತೆ ವಾಗಿ ಕಾಣುತ್ತದೆ.
- ಪೂರ್ವ ಬಾಲ್ಯವಸ್ಥೆ ದಲ್ಲಿ ವಿಕಾಸ :
- ಬಟ್ಟೆ ಧರೆಸಿವುದು ಮತ್ತು ಸ್ಥಾನ ಮಾಡುವುದು ಅನುಕರನೇ ಇಂದ ಕಲಿಯುತ್ತದೆ.
- ಸಾಮಾನ್ಯವಾಗಿ 3 ರಿಂದ 4 ಪದಗಳನ್ನು ವ್ಯಾಕ್ಯ ರಚನೆ ಮಾಡುತ್ತದೆ.
- ಸೂಕ್ಷ್ಮ ವಾಗಿ ವಸ್ತುಗಳನ್ನು ಗಮನಿಸಿ ಅವುಗಳ ಬೇರೆ ಬೇರೆ ನಿರ್ಧಾರ ಮಾಡುತ್ತದೆ.
- ಅದರಿಂದ ಇದನ್ನು ಕಾರ್ಯಪೂರ್ವ ಹಂತ ಎಂದು ಕರೆಯುತ್ತೇವೆ.
ಸಾಮಾಜಿಕ ವಿಕಾಸ :
- ಸ್ನೇಹಿತರೊಂದಿಗೆ ಹೊಂದಿಕೊಳ್ಳುವುದು.
- ಸಮಾಜದಲ್ಲಿ ವಿಸ್ವಾಸ ಬೆಳೆಸುವುದು.
- ಬೆರೆಯುವ ಗುಣವನ್ನು ಬೆಳೆವುದು.
- ಹೆಚ್ಚು ಆಟದಲ್ಲಿ ಆಸಕ್ತಿ ವಹಿಸುವುದು.
- ಈ ಹಂತವನ್ನು “ಕೂಟಯುಗ” ಎನ್ನುವರು.
ತಾರುಣ್ಯವಸ್ಥೆ :
ಈ ಪದವು ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯ Adolescence ಎಂದು ಕರೆಯುವರು Adolescence ಸಮಾನಾರ್ಥಕ ವಾಗಿ ಈ ಪದ ಲ್ಯಾಟಿನ್ ಭಾಷೆಯ Adolescere ಎಂಬ ಪದದಿಂದ ಬಂದಿದೆ. ಇದರ ಅರ್ಥ grow to maturity ಅಂದರೆ ಪರಿಪಕ್ವ ತೆ ಸಾಗುವುದು ಎಂದರ್ಥ.
ಈ ಅವದಿಯು 12 ವರ್ಷಕ್ಕೆ ಪ್ರಾರಂಭ ವಾಗಿ 18 ಕ್ಕೆ ಮುಗಿಯುತ್ತೆ ಎಂದು ವಿಜ್ಞಾನುಗಳ ಕಲ್ಪನೇ ವಾಗಿದೆ, ಯಾಕೆಂದರೆ ಬೇರೆ ದೇಶದಲ್ಲಿ ಒಂದು ವರ್ಷ ಮುಂಚಿತವಾಗಿ ಈ ಹಂತ ಕಾಣಬಹುದು.
ತಾರುಣ್ಯವಸ್ಥೆಯಲ್ಲಿ ಗುಣಲಕ್ಷಣಗಳು :
- ಸಾಮಾನ್ಯವಾಗಿ ಈ ಹಂತವು “ವಸಂತ ಕಾಲ” ಎಂದು ಕರೆಯುತ್ತಾರೆ ಯಾಕೆಂದರೆ ಈ ಅವಧಿಯಲ್ಲಿ ಹೊಸ ಹವ್ಯಾಸ ಗಳು, ಹೊಸ ಪ್ರಯತ್ನ ಮಾಡುವುದು ಹೊಸ ಆಲೋಚನೆ ಮಾಡುವುದುವಾಗಿದೆ.
- ಸಾಮನ್ಯವಾಗಿ ತರುಣ ತರುಣಿಯರು ಕೆಲವು ವಿಷಯಗಳು ಕೆಲವು ಗೊಂದಲಕ್ಕೆ ಉಂಟಾಗುವುದನ್ನು ಅದಕ್ಕೆ ನಾವು “ಆವೇಶ ಕಾಲ” ಎಂದು ಕರೆಯಬಹುದು.
- ಪ್ರಮುಖವಾಗಿ ಈ ಹಂತದಲ್ಲಿ ತರುಣ ತರುಣಿಯರಲ್ಲಿ ಕೆಲವು ಅಂಶಗಳು ಬದಲಾವಣೆ ವಗಬುದು ಲೈಂಗಿಕ ಗ್ರಂಥಿಗಳು, ಹಾರ್ಮೋನು ಬದಲಾವಣೆ ಇವುಗಳಿಂದ ವಿರುದ್ಧ (ಗಂಡು -ಹೆಣ್ಣು )ಲಿಂಗಗಳಿಗೆ ಆಕರ್ಷಣೆ ವಾಗುವುದು ಅದರಿಂದ ನಾವು ಈ ಕಾಲವನ್ನು “ಆಕರ್ಷಣೆ ಕಾಲ” ಎನ್ನುವರು
- ಈ ಹಂತದಲ್ಲಿ ತರುಣ ತರುಣಿಯರು ಕೆಲವು ಪ್ರಮುಖ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಂಡು ಅವರನ್ನು ಅನುಕರಣೆ ಮಾಡಿ ಅವರ ಕ್ರಿಯೆಗಳು ಅವರ ಶೈಲಿಗಳು ನೋಡುತ್ತಾ ಅವರಂತೆ ಮಾಡುವರು ಅದರಿಂದ ಇದನ್ನು ನಾವು "ವ್ಯಕ್ತಿ ಪೂಜೆಯ" ಕಾಲ ಎಂದು ಕೆರೆಯುತ್ತೇವೆ.
- ಉದಾಹರಣೆ : ನನ್ನ ಹೀರೋ ನನ್ನ ಹೀರೋಯಿನ್ ಈಗೆ ಹಲವು ಬಗೆಯ ವ್ಯಕ್ತಿ ಆಯ್ಕೆ ಮಾಡಿ ಅವರರಂತೆ ಕಲ್ಪನೆ ಕಾಣುವುದು
- ಸಾಮನ್ಯ ಈ ಹಂತದಲ್ಲಿ ಯುವಕ ಯುವತಿಯರು ತನ್ನನು ತಾನು ಗುರಿತಿಸಿಕೊಳ್ಳಲು ಏನೇನೋ ಮಾಡಿತ್ತಾರೆ ಅದರಿಂದ "ಗುರಿತಿಸುವಿಕೆ ಕಾಲ" ಎಂದು ಕರೆಯುತ್ತೇವೆ.
ತಾರುಣ್ಯವ್ಯಸ್ಥೆ ಯ ದೈಹಿಕ ಬೆಳವಣಿಗೆಗಳು :
- ಈ ಹಂತದಲ್ಲಿ ಕಂಡು ಬರುವ ತೂಕ, ಎತ್ತರ, ಗಾತ್ರ, ತುಂಬಾ ಬದಲಾವಣೆ ಕಾಣಬಹುದು ಅದರಿಂದ “ಬೆಳವಣಿಗೆ ಬುಗ್ಗೆ “ ಎನ್ನುವರು.
- ಹೆಣ್ಣು ಮಕ್ಕಳಿಗೆ ಶರೀರಕ್ಕೆ ಹೊಸ ಕಾಂತಿ ಬಂದು ಸೌಂದರ್ಯ ವಾಗಿ ಕಾಣುವುದು ಹಾಗೂ ಮಾತಿನಲ್ಲಿ ಮಧುರವಾಗಿ ಕಾಣಬಹುದು.
- ಗಂಡಸರಲ್ಲಿ ಧ್ವನಿ ಗಡಸುತನ ಕಾಣಬಹುದು.
- ಅವರಲ್ಲಿ ಗಡ ಮೀಸೆ ನಾವು ಗಮನಿಸಬೇಕಾದ ಅಂಶ.
- ಪ್ರಕೃತಿ ನಿಯಮದಂತೆ ಗಂಡಿ ನಲ್ಲಿ ಲಿಂಗಾಣು ವೀರ್ಯ ಉತ್ಪಾದಿಸಿ ಮತ್ತು ಹೆಣ್ಣಿನಲ್ಲಿ ಲಿಂಗಾಣು ತತ್ತಿಯನ್ನು ಉತ್ಪಾದಿಸಲು ಸಾಮರ್ಥ್ಯ ಹೊಂಡುತ್ತಾರೆ. ಇದರಿಂದ ಬಾಲಕ ಗಂಡು ವಾಗುತ್ತಾನೆ ಹಾಗೆ ಬಾಲಕಿ ಹೆಣ್ಣು ವಾಗುತ್ತಾಳೆ.
- ಹೆಣ್ಣು ಮಕ್ಕಳಿಗೆ ಋತುಚಕ್ರವು ಪ್ರಾರಂಭವಾಗಿ ತಾಯ್ತಿತನ ಪ್ರಾರಂಭವಾಗುತ್ತದೆ ಹೆಣ್ಣಿನ ನಿರ್ನಾಳ ಗ್ರಂಥಿ ಶ್ರವಿಕೆಯಿಂದ ಲೈಂಗಿಕ ಭಾವನೆಗಳು ಹೆಚ್ಚಾಗುತ್ತವೆ ಅದರಿಂದ ಇದನ್ನು "ಲೈಂಗಿಕ ಪಾಕ್ವತೆ ಕಾಲ" ಎಂದು ಕರೆಯುತ್ತೇವೆ.
ಸಾಮಾಜಿಕ ಬದಲಾವಣೆ :
- ಈ ಹಂತದಲ್ಲಿ ಹೆಚ್ಚು ಸ್ನೇಹಿತರ ಒಡನಾಟ ಬೆಳೆಸುತ್ತಾರೆ.
- ಈ ಹಂತದಲ್ಲಿ ಹೆಣ್ಣು ಗಂಡು ಸಾಹಬಾಳ್ವೆಯನ್ನು ಹೆಚ್ಚು ಕಾಣುತ್ತಾರೆ.
- ಸಮಾಜದಲ್ಲಿ ಗುರಿತಿಸುವಿಕೆಯಲ್ಲಿ ಪ್ರಯತ್ನ ದಲ್ಲಿ ಇರುತ್ತಾರೆ ಅದನ್ನು ಗುರಿತಿಸಿಕೊಳ್ಳುವಿಕೆ ಎನ್ನುವರು.
- ಸಾಮಾನ್ಯ ವಾಗಿ ಸ್ವಾವಲಂಬನೆ ಹಾಗೂ ಸ್ವತಂತ್ರ ವಾಗಿ ಇರಲು ಬಾಯಿಸುತ್ತಾರೆ.
- ಜೀವನದಲ್ಲಿ ಬಾಳ ಸಂಗಾತಿ ಯನ್ನು ಉಡುಕುವ ಜವಾಬ್ದಾರಿ ಹೊಂದಿರುತ್ತಾರೆ.
ತಾರುಣ್ಯವಸ್ಥೆ ಹಂತಗಳು :
ತಾರುಣ್ಯವಸ್ಥೆ ಯಲ್ಲಿ ಪ್ರಮುಖವಾಗಿ ನಾಲ್ಕು ರೀತಿಯ ಹಂತಗಳು ಕೊಡಾಲಾಗಿದೆ ಅವು ಈ ರೀತಿ ಇವೆ.
- ಹದಿಹರೆಯದ ಹಂತ
- ಪ್ರಾರಂಭ ದ ತಾರುಣ್ಯ
- ಮಧ್ಯ ತಾರುಣ್ಯ
- ಉತ್ತರ ತಾರುಣ್ಯ
ತಾರುಣ್ಯವಸ್ಥೆಯಲ್ಲಿ ಎದರಿಸುವ ಸಮಸ್ಯೆಗಳು :
- ಉದ್ವೆಗ ಕರಣ
- ಗೊಂದಲಕ್ಕೆ ಉಂಟಾಗುವುದು.
- ಗುಂಪುಗಾರಿಕೆಯ ಸಮಸ್ಯೆ
- ಮತ್ತೊಬ್ಬರನ್ನು ನೋಡಿ ಹೊಟ್ಟೆ ಕಿಚ್ಚು ಪಡುವುದು.
- ಪ್ರೀತಿ, ಕಾಳಜಿಯಲ್ಲಿ ತೊಂದರೆ.
- ಹೊಂದಾಣಿಕೆ ಸಮಸ್ಯೆ
- ಯುವಕರು ಗಿಡ್ಡ,ದಪ್ಪ, ಎತ್ತರ, ಹೀಗೆ ಹಲವು ಸಮಸ್ಯೆಗಳ ತೊಂದರೆ.
ಸಮಸ್ಯೆಗಳ ಪರಿಹಾರಗಳು :
- ಯುವಕ ಯುವತಿಯರು ಕೇವಲ ದೈಹಿಕ ಬೆಳವಣಿಗೆ ಹೊಂದುವುದು ಮಾತ್ರ ವಲ್ಲದೆ ಅವರಿಗೆ ಆಚಾರ ವಿಚಾರ ನಡೆ ನುಡಿ ಆಸಕ್ತಿ ಬೆಳೆಸಲು ಮುಖ್ಯ
- ಶಿಕ್ಷಕರ ಸರಿಯಾದ ಮಾರ್ಗ ದರ್ಶನ ನೀಡುವದು.
- ಋತುಚಕ್ರ ಬಗ್ಗೆ ಮಾಹಿತಿ ಇಲ್ಲದವರಿಗೆ ಸೂಕ್ತ ವಾದ ಮಾಹಿತಿಯನ್ನು ನೀಡುವುದು ಕಡ್ಡಾಯ.
- ಲೈಂಗಿಕ ಮತ್ತು ಮೌಲ್ಯ ಯುತ ಶಿಕ್ಷಣ ಒಡ್ಗಿಸುವುದು ಉತ್ತಮ.
- ಪ್ರೀತಿ, ಕಾಳಜಿ, ಬಾವನೆ, ಕರುಣೆ ಇವುಗಳ ಬಗ್ಗೆ ಮಾರ್ಗದರ್ಶನ ನೀಡುವುದು.
ಇದು ಇಲ್ಲಿವರಿಗೆ ವಿಕಾಸದ ಹಂತಗಳು ವಿವರಿಸಲಾಗಿದೆ ಇದರಲ್ಲಿ ಏನಾದರು ತಪ್ಪಿದ್ದರೆ ತಿಳಿಸಿ ಹೇಳಿ ನಾನು ಮುಂದೆ ತಪ್ಪುಗಲಾರದೆ ನೋಡಿಕೊಳ್ಳುತ್ತೇನೆ ಹಾಗೆ ಈ ಇದರ ಬಗ್ಗೆ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಫಾಲೋವಿಂಗ್ ಮಾಡಿಕೊಳ್ಳಿ.
0 comments:
Post a Comment