Search This Blog

Powered by Blogger.
  • ()

Labels

ಥಾರ್ನ್‌ಡೈಕ್ ಅವರ ಪ್ರಯತ್ನ ಮತ್ತು ಪ್ರಮಾದ ಕಲಿಕಾ ಸಿದ್ಧಾಂತ

Share it Please

 ಥಾರ್ನ್‌ಡೈಕ್ ರವರ ಪ್ರಯತ್ನ ಮತ್ತು ಪ್ರಮಾದ ಕಲಿಕಾ ಸಿದ್ಧಾಂತ



ಪೀಠಿಕೆ :

ಶಿಕ್ಷಣ ಮನೋವಿಜ್ಞಾನದಲ್ಲಿ ಕಲಿಕೆಯ ಸಿದ್ಧಾಂತಗಳು ಬಹಳ ಪ್ರಮುಖವಾದವು. ಈ ಸಿದ್ಧಾಂತಗಳ ಮೂಲಕ ವಿದ್ಯಾರ್ಥಿಗಳ ಕಲಿಕೆಯ ವಿಧಾನವನ್ನು, ಗುಣಾತ್ಮಕತೆಯನ್ನು ಹಾಗೂ ಶೈಕ್ಷಣಿಕ ಪಾಠದ ವಿನ್ಯಾಸವನ್ನು ಸುಧಾರಿಸಬಹುದು. ಇವುಗಳಲ್ಲಿ ಎಡ್ವರ್ಡ್ ಲೀ ಥಾರ್ನ್‌ಡೈಕ್ (Edward Lee Thorndike) ಅವರ "ಪ್ರಯತ್ನ ಮತ್ತು ಪ್ರಮಾದ (Trial and Error)" ಕಲಿಕಾ ಸಿದ್ಧಾಂತ ಶ್ರೇಷ್ಠ ಸ್ಥಾನವನ್ನು ಹೊಂದಿದೆ. ಈ ಸಿದ್ಧಾಂತವನ್ನು ಅವರು ಪ್ರಾಣಿಗಳ ಮೇಲಿನ ಪ್ರಯೋಗಗಳ ಮೂಲಕ ವಿಕಸಿಸಿದರು. ಇದನ್ನು "ಸಂಧರ್ಭ-ಪ್ರತಿಕ್ರಿಯೆ ಸಿದ್ಧಾಂತ" (Stimulus-Response Theory) ಎಂದೂ ಕರೆಯುತ್ತಾರೆ.ಯಾವುದೇ ಜೀವಿ ಅಥವಾ ಮಾನವ ಸಮಸ್ಯೆಯಲ್ಲಿ ಸಿಲುಕಿದಾಗ ಆ ಸಮಸ್ಯೆ ಬಗೆ ಹರಿಸುವುದು ಹೇಗೆ ಎಂಬುದು ಈ ಥಾರ್ನ್‌ಡೈಕ್ ರವರ ಸಿದ್ಧಾಂತ ತಿಳಿಸುತ್ತದೆ.

ಥಾರ್ನ್‌ಡೈಕ್ ರವರ ಪರಿಚಯ:

ಎಲ್. ಥಾರ್ನ್‌ಡೈಕ್‌ (1874–1949) ಅಮೇರಿಕದ ಪ್ರಸಿದ್ಧ ಮನೋವಿಜ್ಞಾನಿ. ಅವರು ಮುಖ್ಯವಾಗಿ ಪ್ರಾಣಿಗಳ ನಡವಳಿಕೆ ಮತ್ತು ಕಲಿಕೆಯ ವಿಧಾನಗಳ ಕುರಿತಾಗಿ ಅಧ್ಯಯನ ಮಾಡಿದರು. ಅವರು ನ್ಯುಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರ ಪ್ರಮುಖ ಕೃತಿಗಳು Animal Intelligence ಮತ್ತು Educational Psychology.

ಸಿದ್ಧಾಂತದ ಪರಿಕಲ್ಪನೆ :

ಪ್ರಯತ್ನ ಮತ್ತು ಪ್ರಮಾದ ಸಿದ್ಧಾಂತದ ಮುಖ್ಯ ಆಲೋಚನೆ ಇಂತಿದೆ: ವ್ಯಕ್ತಿ ಅಥವಾ ಪ್ರಾಣಿ ಯಾವುದೇ ಹೊಸ ಪರಿಸ್ಥಿತಿಯನ್ನು ಎದುರಿಸಿದಾಗ, ಅದು ಸಮಸ್ಯೆಯನ್ನು ಹೇಗೆ ಪರಿಹರಿಸಲು ಹಲವು ವಿಧದ ಪ್ರಯತ್ನಗಳನ್ನು ಮಾಡುತ್ತದೆ. ಎಂಬುದು ಈ ಪ್ರಯತ್ನಗಳಲ್ಲಿ ಹಲವುವು ವಿಫಲವಾಗಬಹುದು (ಪ್ರಮಾದ), ಆದರೆ ಕೆಲವೊಂದು ಪ್ರಯತ್ನಗಳು ಯಶಸ್ವಿಯಾಗುತ್ತವೆ. ಆ ಯಶಸ್ವಿ ಪ್ರಯತ್ನ ಪುನರಾವೃತಿಯಾದಾಗ ಕಲಿಕೆ ಸಂಭವಿಸುತ್ತದೆ.

ಥಾರ್ನ್‌ಡೈಕ್ ನ ಬೆಕ್ಕಿನ ಪ್ರಯೋಗ :



ಥಾರ್ನ್‌ಡೈಕ್‌ ತಮ್ಮ ಈ ಸಿದ್ಧಾಂತವನ್ನು ಸ್ಥಾಪಿಸಲು ಪ್ರಯೋಗಕ್ಕಾಗಿ ಹೊಟ್ಟೆ ಹಸಿದ ಬೆಕ್ಕನ್ನು ತರುತ್ತಾನೆ ಅದನ್ನು ಒಂದು ಪೆಟ್ಟಿಗೆ ಒಳಗೆ ಕೂಡಿ ಹಾಕುತ್ತಾನೆ ಬೆಕ್ಕಿಗೆ ಅದನ್ನು ಸಮಸ್ಯ ಪೆಟ್ಟಿಗೆ ಎಂದು ಹೆಸರು ಇಡುತ್ತಾನೆ ಬೆಕ್ಕಿಗೆ ಕಾಣುವಂತೆ ಪೆಟ್ಟೆಗೆ ಹೊರಗೆ ಮೀನಿನ ತುಂಡು ಇಡುತ್ತಾನೆ ಪೆಟ್ಟಿಗೆ ಒಳಗೆ ಒಂದು ಅಗುಳಿ ತಾಕಿದಾಗ ಪೆಟ್ಟಿಗೆ ಬಾಗಿಲು ತೆರೆಯುತ್ತದೆ, ಬೆಕ್ಕಿಗೆ ಮೊದಲು ಮಾತ್ರ ಅದಕ್ಕೆ ಗೊತ್ತು ಇರಲಿಲ್ಲ ಅದಕ್ಕೆ ಮೀನು ತಿನ್ನುವ ತವಕ ಬೆಕ್ಕು ಪೆಟ್ಟಿಗೆ ತುಂಬಾ ಹೋರಾಡುತ್ತದೆ, ಹರಚುತ್ತದೆ ತುಂಬಾ ಪ್ರಯತ್ನ ಪಡೀತಿರುವಾಗ ಪೆಟ್ಟಿಗೆ ಒಳಗೆ ಇರುವ ಅಗುಳಿ ಬೆಕ್ಕಿನ ಕಾಲು ತಾಕಿದಾಗ ಬಾಗಿಲು ತೆರೆಯಿತು ನಂತರ ಮೀನಿನ ತುಂಡು ತಿಂದಿತ್ತು ಆದರೆ ಬೆಕ್ಕಿನ ಹಸಿವು ನಿಗಲಿಲ್ಲ ಮತ್ತೆ ಅದೇ ಬೆಕ್ಕು ಪೆಟ್ಟಿಗೆ ಒಳಗೆ ಹಾಕಿ ಅದೇ ತರ ಸಮಸ್ಯೆ ಕೊಟ್ಟು ಈಗೆ ಪದೇ ಪದೇ ಬಾರಿ ಬಾರಿ ಪ್ರಯತ್ನ ಮಾಡಿದಾಗ ಸಮಸ್ಯೆ ಕಡಿಮೆ ಆಗುತ್ತಾ ಹೋಯಿತು ಬೆಕ್ಕಿಗೆ ತಿಳಿಯಿತು ಆ ಅಗುಳಿ ತಗೋದಾಗ ಮಾತ್ರ ಹೊರಗೆ ಬರಬಹುದು ಎಂದು ಇದರ ಅನ್ವಯ ದೋಷ ಕಡಿಮೆ ಆಗಿ ಕಲಿಕೆ ಉಂಟಾಗುತ್ತದೆ ಆದರೆ ಇದನ್ನು ಪ್ರಯತ್ನ ದೋಷ ಕಲಿಕೆ ಎಂದು ಕರೆಯುತ್ತೇವೆ.

ಸಿದ್ಧಾಂತದ ಸೈಕ್ಷಣಿಕ ನಿಯಮಗಳು :

ಥಾರ್ನ್‌ಡೈಕ್ ತನ್ನ ಸಿದ್ಧಾಂತದ ಆಧಾರದ ಮೇಲೆ ಮೂರು ಪ್ರಮುಖ ನಿಯಮಗಳನ್ನು ರೂಪಿಸಿದರು:

1. ದ್ಧತೆ ನಿಯಮ (Law of Readiness): ವಿದ್ಯಾರ್ಥಿಯು ಕಲಿಯಲು ಮನಃಸ್ಥಿತಿಯಲ್ಲಿದ್ದಾಗ ಕಲಿಕೆ ಸುಲಭವಾಗುತ್ತದೆ.

ಮಕ್ಕಳಿಗೆ ಕಲಿಕೆ ಪರಿಣಾಮಕಾರಿಯಾಗಬೇಕಾದರೆ ಮಕ್ಕಳಿಗೆ ಪೀಠಿಕೆ ಅವರ ಮಾನಸಿಕ ಪ್ರಬುದ್ಧ ಗೊಳಿಸುವುದು.

2. ಅಭ್ಯಾಸ ನಿಯಮ (Law of Exercise): ಪುನರಾವೃತಿಯಾಗಿ ಅಭ್ಯಾಸ ಮಾಡಿದಾಗ ಕಲಿತ ವಿಷಯದ ಮರ್ಮ ಬದಿಯಾಗುತ್ತದೆ.

ಪ್ರಯತ್ನ ಮಾಡುತ್ತ ಕಲಿತರೆ ನಮ್ಮಲ್ಲಿ ದೋಷ ಕಡಿಮೆ ವಾಗುತ್ತದೆ 

3. ಪರಿಣಾಮ ನಿಯಮ (Law of Effect):

ಮಕ್ಕಳಿಗೆ ಕಲಿಕೆ ಉತ್ತಮ ಗೊಳಿಸಲು ಅವರಿಗೆ ಪ್ರೇರಣೆ ತುಂಬುವುದು, ಬಹುಮಾನ ಕೊಡುವುದು, ಆಸಕ್ತಿ ತರುವುದು ಮಾಡುದರೆ ಕಲಿಕೆ ಸುಗಮ ವಾಗುವುದು.

ಉಪಸಂಹಾರ:

ಥಾರ್ನ್‌ಡೈಕ್ ಅವರ ಪ್ರಯತ್ನ ಮತ್ತು ಪ್ರಮಾದ ಸಿದ್ಧಾಂತವು ಶಿಕ್ಷಣ ಕ್ಷೇತ್ರದಲ್ಲಿ ಬಹುಮುಖ್ಯವಾದ ಕಲಿಕೆಯ ಯಾಗಿದೆ. ಶೈಕ್ಷಣಿಕ ಕಲಿಕೆಯಲ್ಲಿ ಈ ಸಿದ್ಧಾಂತದ ನಿಯಮಗಳು ಉಪಯುಕ್ತವಾಗುತ್ತವೆ. ಈ ಸಿದ್ಧಾಂತದ ಮೂಲಕ ನಾವು ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಬದಲಾಗುವ ಹಂತಗಳನ್ನು ಅರ್ಥಮಾಡಿಕೊಳ್ಳಬಹುದು. ಈ ರೀತಿಯಾಗಿ, ಥಾರ್ನ್‌ಡೈಕ್ ಅವರ ಸಿದ್ಧಾಂತವು ಶಿಕ್ಷಕರಿಗೆ ಉಪಯುಕ್ತ ಮಾರ್ಗದರ್ಶನ ನೀಡುತ್ತದೆ.


ಇದರಲ್ಲಿ ಏನಾದರು ಪ್ರಶ್ನೆಗಳು, ಸಮಸ್ಯೆಗಳು ಇದ್ದರೆ ಕಾಮೆಂಟ್ ಮೂಲಕ ತಿಳಿಸಿ ಹಾಗೆ Tet ಪ್ರರೀಕ್ಷೆ ಗಾಗಿ ಓದಿತ್ತಿರುವ ಸ್ನೇಹಿತರೆ ಕೂಡ ಶೇರ್ ಮಾಡಿ ಪೇಜ್ ಫಾಲೋ ಮಾಡಿ.


Written by

We are Creative Blogger Theme Wavers which provides user friendly, effective and easy to use themes. Each support has free and providing HD support screen casting.

0 comments:

Post a Comment

© 2013 HARIVU HABBA . All rights resevered. Designed by Templateism