ನಮಸ್ಕಾರ ಸ್ನೇಹಿತರೆ,
ಮಕ್ಕಳ ಭವಿಷ್ಯದ ಮುಂದೆ ಯಾವ ಭವಿಷ್ಯ ವಿಲ್ಲಾ ಎಂಬ ಮಾತಿನಂತೆ ಈಗಾ ಕರ್ನಾಟಕ ಸರಕಾರ ತಿಳಿಸುವುದೇನೆಂದರೆ ಯಾರೆಲ್ಲ 5 ನೇ ತರಗತಿ ನವೋದಯ ಪರೀಕ್ಷೆ ಬರಿದಿರೋ ಅವರೆಲ್ರಿಗೂ ಒಂದು ಉಚಿತ ಅವಕಾಶ ಕೊಟ್ಟಿದೆ ಅದುವೇ 6 ತರಗತೆಗೆ ಅರ್ಜಿ ಸಲ್ಲಿಸುವ ಅವಕಾಶ ನವೋದಯ ವಿದ್ಯಾಲಯ ಕೇಂದ್ರಕ್ಕೆ. ಎಲ್ಲರಿಗೂ ಚಿಂತೆಯೇ ಇರತ್ತೆ. ಈಗ ನವೋದಯ ವಿದ್ಯಾಲಯ (Jawahar Navodaya Vidyalaya) 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕೋ ಅವಕಾಶ ಬಂದಿದೆ. ನೀವನ್ನೂ ಈಗಲೇ ಮಕ್ಕಳ ಭವಿಷ್ಯಕ್ಕಾಗಿ ಜಾಗರೂಕರಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಅರ್ಜಿಗೆ ಕೊನೆ ದಿನಾಂಕ:
ಈ ಅರ್ಜಿ ಹಾಕೋಕೆ ಕೊನೆ ದಿನಾಂಕ 29-07-2025 ಅಂತಾ ತಿಳಿಸಿರೋದು. ಆದ್ದರಿಂದ ಸಮಯ ಮೀರಿದ ಮೇಲೆ ಅರ್ಜಿ ಹಾಕೋಕೆ ಬರಲ್ಲ ಈಗಲೇ ಅರ್ಜಿ ಹಾಕಿ ಬಿಡಿ.
ಅರ್ಜಿಯನ್ನು ಹೇಗೆ ಹಾಕೋದೂ ತಿಳ್ಕೊಳ್ಳಿ:
ಆನ್ಲೈನ್ ಮೂಲಕ ಅರ್ಜಿ ಹಾಕಬೇಕಾಗುತ್ತದೆ.
Navodaya ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ:
👉 https://navodaya.gov.in
ಅಲ್ಲಿನ “Class 6 Admission” ಅಥವಾ “JNVST 2025” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಬಳಸಿ ರಜಿಸ್ಟ್ರೇಷನ್ ಮಾಡಿ.
ನಂತರ ಫಾರ್ಮ್‌ನಲ್ಲಿ ಮಕ್ಕಳ ಹೆಸರು, ತಂದೆ-ತಾಯಿಯ ಹೆಸರು, ಶಾಲೆಯ ವಿವರ, ವಿಳಾಸ ಇವೆಲ್ಲಾ ಸರಿಯಾಗಿ ತುಂಬಿ ಕೊಡಿ.
ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು (ಕೆಳಗೆ ವಿವರ ಇದೆ).
ಕೊನೆಗೆ “Submit” ಮಾಡಿದ್ಮೆಲೆ ಆಪ್ಲಿಕೇಶನ್ ಸಂಖ್ಯೆಯನ್ನು ಉಳಿಸಿಟ್ಟುಕೊಳ್ಳಿ. ಇದು ಹಳೆಯ ದಿನಗಳಲ್ಲಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡೋದಕ್ಕೆ ಬೇಕಾಗತ್ತೆ.
ಅರ್ಜಿಗೆ ಬೇಕಾಗುವ ಡಾಕ್ಯುಮೆಂಟ್ಸ್ (ಅವಶ್ಯಕ ದಾಖಲೆಗಳು):
- ಜನ್ಮ ಪ್ರಮಾಣಪತ್ರ (Birth Certificate):
- ವಿದ್ಯಾರ್ಥಿಯ ಭಾವಚಿತ್ರ.
- ವಿದ್ಯರ್ಥಿಯ & ಪಾಲಕರ ಸಹಿ.
- ಆಧಾರ್ ಕಾರ್ಡ್.
- ವಾಸಸ್ಥಳ ಪ್ರಮಾಣ ಪಾತ್ರ (ಅಗತ್ಯವಿದ್ದರೆ ಮಾತ್ರ,)
- ಎಸ್‌ಸಿ / ಎಸ್‌ಟಿ / ಓಬಿಸಿ / ಇಬಿಸಿ ವರ್ಗಕ್ಕೆ ಸೇರಿದವರಾದರೆ, ಆ ವರ್ಗದ ಪ್ರಮಾಣಪತ್ರವನ್ನು ಹಾಕಬೇಕು.
- ನೀವು ಯಾವ ಜಿಲ್ಲೆ ಮತ್ತು ತಾಲೂಕಿನಲ್ಲಿ ವಾಸಿಸುತ್ತೀರೋ, ಅದರ ಸಾಬೀತು.
- ಮಕ್ಕಳಿಗೆ ಪ್ರಸ್ತುತ 5ನೇ ತರಗತಿಯಲ್ಲಿ ಅಭ್ಯಾಸ ನಡೆಯುತ್ತಿರುವ ಶಾಲೆಯಿಂದ ಅರ್ಹತಾ ಪ್ರಮಾಣಪತ್ರ.
- ಪಾಸ್ಪೋರ್ಟ್ ಸೈಜ್ ಫೋಟೋ:
- ಜಾತಿ ಪ್ರಮಾಣ ಪಾತ್ರ.
- ಕಲರ್ ಫೋಟೋ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಮಕ್ಕಳ ಸಹಿ ಅಥವಾ ಪೋಷಕರ ಸಹಿ ಸ್ಕ್ಯಾನ್ ಮಾಡಿ ಹಾಕಬೇಕು.
ಪ್ರವೇಶ ಪರೀಕ್ಷೆ ಯಾವಾಗ?:
ಪರೀಕ್ಷೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ, ಆದರೆ ಸಾಮಾನ್ಯವಾಗಿ ಇದು ಫೆಬ್ರವರಿ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತೆ. ಸಮಯಕ್ಕೆ ಸಿದ್ಧತೆ ಮಾಡೋಕೆ ಈಗಲೇ ಪ್ಲಾನ್ ಮಾಡೋಣ.
ಕೊನೆ ಮಾತು:
ನವೋದಯ ಶಾಲೆಗಳಲ್ಲಿ ಉಚಿತ ವಿದ್ಯಾಭ್ಯಾಸ, ವಸತಿ, ಊಟ ಮತ್ತು ಎಲ್ಲಾ ತರಗತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತೆ. ಗ್ರಾಮೀಣ ಮಕ್ಕಳು ದೊಡ್ಡ ಮಟ್ಟದ ಅವಕಾಶಗಳನ್ನು ತಲುಪೋದು ಇಂಥ ಪರೀಕ್ಷೆಗಳ ಮೂಲಕ ಸಾಧ್ಯ. ಆದ್ದರಿಂದ, ನಿಮ್ಮ ಮಗುವಿಗೆ ಉತ್ತಮ ಭವಿಷ್ಯ ರೂಪಿಸಲು ಈ ಅರ್ಜಿ ಹಾಕಿ ಬಿಡಿ, ಒಂದು ಬಾರಿ ಪ್ರಯತ್ನ ಕೊಡಿ.
ನಿಮ್ಮ ಬಾಲಕ/ಬಾಲಕಿ ನವೋದಯ ಶಾಲೆಯಲ್ಲಿ ಸೇರುವದಕ್ಕೂ, ಜೀವನದಲ್ಲಿ ಬೆಳೆಯೋದಕ್ಕೂ ನಮ್ಮ ಹಾರೈಕೆಗಳು.
ಇದೇ ರೀತಿಯ ಮಾಹಿತಿಗಾಗಿ ನನ್ನ ಬ್ಲಾಗನ್ನು ನೋಡ್ತಾ ಇರಿ: harivuhabba.blogspot.com
ಇದರಲ್ಲಿ ಏನಾದರು ಸಮಸ್ಯೆ ವಿದ್ದರೆ ಕಾಮೆಂಟ್ ಮೂಲಕ ತಿಳಿಸಿ.
ಈಗೆ ಹಲವು ವಿಷಯಗ ಮಾಹಿತಿ ಬೇಕಾದರೆ ಈ ಪೇಜ್ ಫಾಲೋ ಮಾಡಿ ಜಿಮೈಲ್ ಮೂಲಕ
0 comments:
Post a Comment