ಆತ್ಮೀಯ ಸ್ನೇಹಿತರೆ, ಈಗ ನಿಮ್ಮ ಪಾಠಗಳು ಹೆಚ್ಚು ಚೆಂದವಾಗಿದೆ. ನಿಜವಾದ ಜೀವನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ . ಹೊಸ ಪಾಠಕ್ರಮ ನಿಮಗೆ ಪುಸ್ತಕದ ಜ್ಞಾನವಷ್ಟೆ ಅಲ್ಲ, ಬದುಕಿನಲ್ಲಿ ಉತ್ತಮ ವ್ಯಕ್ತಿಯಾಗಲು ಸಹ ಮಾರ್ಗ ತೋರಿಸುವ ಏಕೈಕ ವೆಬ್ಸೈಟ್ ವಾಗಿದೆ. ಓದೋದು ಕೇವಲ ಅಂಕಗಳಿಗೆಲ್ಲ ಅಲ್ಲ – ನಾವು ಹೇಗೆ ಯೋಚಿಸಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಲು ಈ ಹೊಸ ಪಾಠಗಳು ಸಹಾಯ ಮಾಡುತ್ತವೆ. ನಿಮಗೆ ಇಷ್ಟವಾಗುವ ವಿಷಯಗಳಲ್ಲಿ ಹೊಸ ಹೊಸ ಕಲಿಕೆಗಳು ಇದೆ. ಹೀಗಾಗಿ, ಪ್ರತಿ ಪಾಠವನ್ನು ಉತ್ಸಾಹದಿಂದ ಓದಿ, ಪ್ರಶ್ನೆ ಮಾಡಿ, ಕಲಿತು ಬೆಳೆದು, ಒಳ್ಳೆಯ ಪ್ರಜೆಯಾಗಿ ಹೊರಹೊಮ್ಮಿ." ಎಂದು ಆರೈಸುತ್ತೇನೆ.
2025-26ರ TET ಹೊಸ ಪಠ್ಯಕ್ರಮ – ಸಂಪೂರ್ಣ ಮಾಹಿತಿ
ಕರ್ನಾಟಕ ರಾಜ್ಯದ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಯಲ್ಲಿ ಹೊಸದಾಗಿ ರೂಪುಗೊಂಡಿರುವ ಪಠ್ಯಕ್ರಮ 2025-26ರ ಅವಧಿಗೆ ಅನೇಕ ಬದಲಾವಣೆಗಳನ್ನು ಹೊಂದಿದೆ. ಈ ಬದಲಾವಣೆಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ರೂಪುಗೊಂಡಿದ್ದು, ಅಭ್ಯರ್ಥಿಗಳು ಹೊಸ syllbus ಪ್ರಕಾರ ತಯಾರಿ ಮಾಡಿಕೊಳ್ಳುವುದು ಅಗತ್ಯವಾಗಿದೆ.
🔹 ಹೊಸ ಪಠ್ಯಕ್ರಮದ ಹಿನ್ನಲೆ:
ಪೂರ್ವ ಪಠ್ಯಕ್ರಮವು 2011 ರಿಂದ 2023ರವರೆಗೆ ಬಳಸಲ್ಪಡುತ್ತಿದ್ದು, ಹಲವಾರು ಬಾರಿ ಸುಧಾರಣೆ ಮಾಡುವ ಅಗತ್ಯವಿತ್ತು. ನವೀನ ಎನ್‌ಸಿಇಆರ್‌ಟಿ (NCERT) ಮಾರ್ಗಸೂಚಿ, NEP 2020 (ನೂತನ ಶಿಕ್ಷಣ ನೀತಿ), ಮತ್ತು ಪೌರತ್ವ ಶಿಕ್ಷಣ, ಸಮಾನತೆ, ಲಿಂಗಸಮತೆ ಮುಂತಾದ ತತ್ವಗಳನ್ನು ಒಳಗೊಂಡಂತೆ ಹೊಸ ಪಠ್ಯಕ್ರಮವನ್ನು ರೂಪಿಸಲಾಗಿದೆ. ಅದರಂತೆ ಈ ಕೆಳಗಿಂತೆ ವಿವರಿಸಲಾಗಿದೆ.
📚 ಪೇಪರ್ 1 (1 ರಿಂದ 5ನೇ ತರಗತಿ) – ಪ್ರಮುಖ ವಿಷಯಗಳು
ಪೇಪರ್ 1 ಗೆ ಅರ್ಹರಾಗಿರುವ ಅಭ್ಯರ್ಥಿಗಳು ಸಾಮಾನ್ಯವಾಗಿ ಪ್ರಾಥಮಿಕ ಶಾಲೆ ಶಿಕ್ಷಕರಾಗಲು ಅರ್ಜಿ ನೀಡುತ್ತಾರೆ. ಹೊಸ ಪಠ್ಯಕ್ರಮದ ಪ್ರಕಾರ ಪ್ರಮುಖ ವಿಷಯಗಳು ಈ ಕೆಳಗಿನಂತಿವೆ:
- ಶೈಕ್ಷಣಿಕ ಮನೋವಿಜ್ಞಾನ ಮತ್ತು ಮಕ್ಕಳ ಬೆಳವಣಿಗೆ (CDP) – 30 ಅಂಕ
- ಶೈಕ್ಷಣಿಕ ಉದ್ದೇಶಗಳು
- ಕಲಿಕೆ ಶೈಲಿಗಳು
- ಮಕ್ಕಳ ವಿವಿಧ ಮನೋವೃತ್ತಿಗಳು
- ಭಾಷೆ – 1 (ಕನ್ನಡ) – 30 ಅಂಕ
- ಭಾಷಾ ಕಲಿಕೆಯಲ್ಲಿ ಆಟದ ಪಾತ್ರ
- ಭಾಷಾ ಜ್ಞಾನ ಮತ್ತು ವ್ಯಾಕರಣ
- ಭಾಷೆ – 2 (ಇಂಗ್ಲಿಷ್) – 30 ಅಂಕ
- Pedagogy of Language Development
- Grammar & Comprehension
- ಗಣಿತ – 30 ಅಂಕ
- ಮೂಲಭೂತ ಗಣಿತ ಪರಿಕಲ್ಪನೆಗಳು
- Arithmetic & Geometry
- Pedagogical issues
- ಪರಿಸರ ಅಧ್ಯಯನ (EVS) – 30 ಅಂಕ
- ಪ್ರಕೃತಿ, ಸಮಾಜ, ವಿಜ್ಞಾನ
- ಪರಿಸರ ಶಿಕ್ಷಣದ ಉಪಾಯಗಳು
📘 ಪೇಪರ್ 2 (6 ರಿಂದ 8ನೇ ತರಗತಿ) – ಪ್ರಮುಖ ವಿಷಯಗಳು:
ಪೇಪರ್ 2 ಅನ್ನು ಉಚ್ಚ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ರೂಪಿಸಲಾಗಿದೆ. ಇಲ್ಲಿ ಹೊಸ ಪಠ್ಯಕ್ರಮದ ಪ್ರಕಾರ ವಿಷಯಗಳ ವಿಸ್ತಾರ ಹೆಚ್ಚಿಸಲಾಗಿದೆ:
- ಶೈಕ್ಷಣಿಕ ಮನೋವಿಜ್ಞಾನ ಮತ್ತು ಮಕ್ಕಳ ಬೆಳವಣಿಗೆ – 30 ಅಂಕ
- ಭಾಷೆ – 1 (ಕನ್ನಡ) – 30 ಅಂಕ
- ಭಾಷೆ – 2 (ಇಂಗ್ಲಿಷ್) – 30 ಅಂಕ
- ವೈಷಯಿಕ ಆಯ್ಕೆ (Math/Science ಅಥವಾ Social Science) – 60 ಅಂಕ
- ಗಣಿತ ಮತ್ತು ವಿಜ್ಞಾನ (60 ಅಂಕ):
- ಗಣಿತ ಶಿಕ್ಷಣದ ತತ್ವಗಳು
- ವಿಜ್ಞಾನ ತತ್ವಗಳು, ಪ್ರಯೋಗಗಳು
- Pedagogical concerns
- ಸಾಮಾಜಿಕ ವಿಜ್ಞಾನ (60 ಅಂಕ):
- ಇತಿಹಾಸ, ಭೂಗೋಳ, ನಾಗರಿಕ ಶಾಸ್ತ್ರ
- ಸಾಮಾಜಿಕ ವಿಷಯಗಳ ಅಧ್ಯಯನದ ಶೈಲಿಗಳು
🔄 ಹೊಸ ಬದಲಾವಣೆಗಳು:
💡 ಶೈಕ್ಷಣಿಕ ಮನೋವಿಜ್ಞಾನ ಭಾಗದಲ್ಲಿ NEP 2020 ಅಂಶಗಳು ಸೇರಿಸಲಾಗಿದೆ.
🧠 ಬೌದ್ಧಿಕ ಸಾಮರ್ಥ್ಯ, ಕೌಶಲ ಅಭಿವೃದ್ಧಿ ಕುರಿತು ಹೆಚ್ಚಿನ ಒತ್ತಡ.
🌍 ಪರಿಸರ, ಸಹಜಿಕ ಜೀವನಚರ್ಯೆಗಳಿಗೆ ಸಂಬಂಧಿಸಿದ ಪಾಠಗಳು ಹೆಚ್ಚಿಸಲಾಗಿದೆ.
📘 ಪಠ್ಯಗ್ರಂಥಗಳಾದ ಕಣ್ಮಣಿ, ಚಿಗುರು, ಚಿಲುಮೆ, ಹಿರಿಮುಡಿ ಇತ್ಯಾದಿಯ ಪರಿಕಲ್ಪನೆಗಳು ಸೇರಿವೆ.
✅ ಪರೀಕ್ಷೆಗೆ ತಯಾರಿ ಸಲಹೆಗಳು:
ಹೊಸ ಪಠ್ಯಕ್ರಮದ ಪ್ರಕಾರ ಪ್ರತಿ ವಿಷಯದ ಪೆಡಗಾಜಿ (Pedagogy) ಮೇಲೆ ಹೆಚ್ಚು ಒತ್ತಡವಿದೆ.
NCERT & SCERT ಪುಸ್ತಕಗಳು ಓದಿ ಅಭ್ಯಾಸ ಮಾಡಿ.
ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ model question papers ಮತ್ತು mock tests ಉಪಯೋಗಿಸಿ.
ಕೊನೇದಾಗಿ :
ಹೊಸ ಪಠ್ಯಕ್ರಮವು ಅಭ್ಯರ್ಥಿಗಳ ಶೈಕ್ಷಣಿಕ ತಯಾರಿಗೆ ಹೊಸ ದಿಕ್ಕು ನೀಡುತ್ತದೆ. ಸರಿಯಾದ ಸಮಯದಲ್ಲಿ ಪಠ್ಯಕ್ರಮದ ಅಧ್ಯಯನ ಮತ್ತು ಅಭ್ಯಾಸದ ಮೂಲಕ TET ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು. ಈ ಬದಲಾವಣೆಗೆ ಅನುಗುಣವಾಗಿ ತಯಾರಿ ಮಾಡಿಕೊಳ್ಳಿ, ಯಶಸ್ಸು ನಿಮ್ಮದಾಗಲಿದೆ!
0 comments:
Post a Comment