ಆತ್ಮೀಯ ಸ್ನೇಹಿತರೆ…..
ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಯ ವಿದ್ಯಾಭ್ಯಾಸದ ಮಟ್ಟ, ತಿಳುವಳಿಕೆ, ಕೌಶಲ್ಯ ಹಾಗೂ ಕಲಿತ ವಿಷಯದ ಅಳವಡಿಕೆಯನ್ನು ಅಳೆಯುವ ಪ್ರಮುಖ ಸಾಧನವೆಂದರೆ ಸಾಧನಾ ಪರೀಕ್ಷೆ. ಇವುಗಳನ್ನು ಇಂಗ್ಲಿಷ್‌ನಲ್ಲಿ Achievement Test ಎಂದು ಕರೆಯಲಾಗುತ್ತದೆ.
ಮನೋವಿಜ್ಞಾನದಲ್ಲಿ ಸಾಧನಾ ಪರೀಕ್ಷೆಯು, ಕಲಿಕೆಯ ನಂತರ ವಿದ್ಯಾರ್ಥಿ ಎಷ್ಟು ಮಟ್ಟಿಗೆ ಗುರಿ ತಲುಪಿದ್ದಾನೆ ಎಂಬುದನ್ನು ಅಳೆಯುವ ಪ್ರಕ್ರಿಯೆ.
TET (Teacher Eligibility Test) ನಲ್ಲಿ ಸಹ ಈ ಪರಿಕಲ್ಪನೆ ಪ್ರಮುಖವಾಗಿದೆ, ಏಕೆಂದರೆ ಶಿಕ್ಷಕರಾಗಿ ಕೆಲಸ ಮಾಡುವವರು ವಿದ್ಯಾರ್ಥಿಗಳ ಸಾಧನೆಯನ್ನು ಅಳೆಯುವ ವಿಧಾನಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.
1. ಸಾಧನಾ ಪರೀಕ್ಷೆಯ ಅರ್ಥ:
‘ಸಾಧನೆ’ ಎಂಬ ಪದದ ಅರ್ಥ — ಯಾವುದೋ ಗುರಿಯನ್ನು ತಲುಪುವುದು.
‘ಪರೀಕ್ಷೆ’ ಎಂದರೆ ಮೌಲ್ಯಮಾಪನ ವಿಧಾನ.
ಹೀಗಾಗಿ ಸಾಧನಾ ಪರೀಕ್ಷೆ ಎಂದರೆ – ಕಲಿಕೆಯ ನಂತರ ವಿದ್ಯಾರ್ಥಿಯು ನಿರ್ದಿಷ್ಟ ವಿಷಯದಲ್ಲಿ ಸಾಧಿಸಿದ ಮಟ್ಟವನ್ನು ಪರೀಕ್ಷಿಸುವ ವಿಧಾನವಾಗಿದೆ.
2. ಸಾಧನಾ ಪರೀಕ್ಷೆಯ ಉದ್ದೇಶ:
- ವಿದ್ಯಾರ್ಥಿಯ ಕಲಿಕೆಯ ಮಟ್ಟವನ್ನು ಪತ್ತೆಹಚ್ಚುವುದು
- ಅವನ ಬಲ ಹಾಗೂ ದುರ್ಬಲತೆಯನ್ನು ಗುರುತಿಸುವುದು
- ಮುಂದಿನ ಬೋಧನೆಗೆ ಮಾರ್ಗದರ್ಶನ ನೀಡುವುದು
- ವಿದ್ಯಾರ್ಥಿ ನಿರ್ದಿಷ್ಟ ಗುರಿ ತಲುಪಿದನಾ ಎಂದು ಪರಿಶೀಲಿಸುವುದು
- ಅಧ್ಯಾಪಕರ ಬೋಧನಾ ಫಲಿತಾಂಶವನ್ನು ಮೌಲ್ಯಮಾಪನ ಮಾಡುವುದು
3. ಸಾಧನಾ ಪರೀಕ್ಷೆಯ ಲಕ್ಷಣಗಳು:
- ಗುರಿ ಆಧಾರಿತ – ನಿರ್ದಿಷ್ಟ ಪಾಠ ಅಥವಾ ಕೋರ್ಸ್ ಗುರಿ ತಲುಪಿದೆಯೇ ಎಂದು ಪರೀಕ್ಷಿಸುತ್ತದೆ.
- ಪಾಠಕ್ರಮಕ್ಕೆ ಸಂಬಂಧಿತ – ಕಲಿಸಿದ ಪಾಠದಿಂದಲೇ ಪ್ರಶ್ನೆಗಳು ಬರುತ್ತವೆ.
- ನಿಯಮಿತ ಅವಧಿ – ಪಾಠದ ಅಂತ್ಯದಲ್ಲಿ ಅಥವಾ ಅಧ್ಯಾಯದ ನಂತರ ನಡೆಸಲಾಗುತ್ತದೆ.
- ವಿಷಯಾಧಾರಿತ – ವಿಷಯದ ಜ್ಞಾನ, ಕೌಶಲ್ಯ ಹಾಗೂ ಅನ್ವಯಿಕತೆಗೆ ಒತ್ತು.
- ಮಾನಸಿಕ ಅಂಶ – ವಿದ್ಯಾರ್ಥಿಯ ಮನೋವಿಜ್ಞಾನ, ಆಸಕ್ತಿ, ಪ್ರೇರಣೆಗಳಿಗೂ ಸಂಬಂಧ.
4. ಸಾಧನಾ ಪರೀಕ್ಷೆಯ ಪ್ರಕಾರಗಳು:
- ಪ್ರಾಮಾಣಿಕೃತ ಪರೀಕ್ಷೆ (Standard Test)
- ಶಿಕ್ಷಕ ನಿರ್ಮಿತ ಪರೀಕ್ಷೆ (Teacher made Test)
5. ವಸ್ತುನಿಷ್ಠ ಪ್ರಶ್ನೆಗಳು (Objective Type):
- ಬಹು ಆಯ್ಕೆ ಪ್ರಶ್ನೆ
- ಸರಿ ತಪ್ಪು
- ಹೊಂದಿಸಿ ಬರೆಯಿರಿ
- ಬಿಟ್ಟ ಸ್ಥಳ ತುಂಬಿರಿ
- ಕ್ರಮ ಜೋಡಣೆ
6. ವಿಷಯ ನಿಷ್ಠ ಪ್ರಶ್ನೆ(Subjective Test) :
- ಮೌಖಿಕ (Orel)
- ಲಘು ಮಾದರಿ (Short Answer )
- ಪ್ರಬಂಧ ಮಾದರಿ (Essay)
7. TET ಸಂಬಂಧ
TET ಪರೀಕ್ಷೆಯಲ್ಲಿ ಶೈಕ್ಷಣಿಕ ಮನೋವಿಜ್ಞಾನ ವಿಭಾಗದಲ್ಲಿ ಸಾಧನಾ ಪರೀಕ್ಷೆಯ ಕುರಿತ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಲಾಗುತ್ತವೆ.
8. ಸಾಧನಾ ಪರೀಕ್ಷೆಯ ಮಹತ್ವ:
- ವಿದ್ಯಾರ್ಥಿ ಮೌಲ್ಯಮಾಪನ
- ಪಠ್ಯಕ್ರಮದ ಪರಿಣಾಮಕಾರಿತ್ವ
- ಬೋಧನಾ ವಿಧಾನ ಸುಧಾರಣೆ
- ವಿದ್ಯಾರ್ಥಿ ಪ್ರೇರಣೆ
9. ಸಮಾರೋಪ:
ಸಾಧನಾ ಪರೀಕ್ಷೆ ವಿದ್ಯಾರ್ಥಿಯ ಕಲಿಕೆ ಮಟ್ಟವನ್ನು ತಿಳಿಯಲು ಹಾಗೂ ಮುಂದಿನ ಬೋಧನೆಗೆ ಮಾರ್ಗದರ್ಶನ ನೀಡಲು ಅತ್ಯಂತ ಮುಖ್ಯವಾದುದು. ಶಿಕ್ಷಕರಾಗಿ, ವಿದ್ಯಾರ್ಥಿಯ ಬಲ–ದುರ್ಬಲತೆಗಳನ್ನು ಗುರುತಿಸಿ, ಬೋಧನೆಯನ್ನು ಸುಧಾರಿಸಲು ಇದು ಸಹಾಯಕ.
ಇದರಲ್ಲಿ ಏನಾದರು ತಪ್ಪು ಮಾಹಿತಿ ಇದ್ದರೆ ಕಾಮೆಟ್ ಮೂಲಕ ತಿಳಿಸಿ ಹಾಗೆ ಈ ಪೇಜ್ ಜಿಮೈಲ್ ಮೂಲಕ ಫಾಲೋ ಆಗಿ ಇದೆ ರೀತಿ TET NOTES, Quiz, Question paper ಗಾಗಿ ಗೂಗಲ್ ನಲ್ಲಿ harivuhabba ಅಂತ ಟೈಪ್ ಮಾಡಿ ದಿನನಿತ್ಯ ನೋಟ್ಸ್ ನಿಮ್ಮದಾಗಿಸಿಕೊಳ್ಳಿ.
0 comments:
Post a Comment