Search This Blog

Powered by Blogger.
  • ()

Labels

ಕಂಪ್ಯೂಟರ್‌ನ ಇತಿಹಾಸ ಮತ್ತು ತಲೆಮಾರುಗಳು | Computer History in Kannada

  ಕಂಪ್ಯೂಟರ್ ಇಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇವತ್ತು ನಾವು ಬಳಸುತ್ತಿರುವ ಆಧುನಿಕ ಕಂಪ್ಯೂಟರ್‌ಗಳು ಹೀಗೆ ತಕ್ಷಣ ಬಂದಿಲ್ಲ. ಹಲವು ವರ್ಷಗಳ...

  • 2793 Pine St

    2793 Pine St

    Nulla facilisi. Cras blandit elit sit amet eros sodales, non accumsan neque mollis. Nullam tempor sapien tellus, sit amet posuere ante porta quis. Nunc semper leo diam, vitae imperdiet mauris suscipit et. Maecenas ut neque lectus. Duis et ipsum nec felis elementum pulvi...

  • 1100 Broderick St

    1100 Broderick St

    Nulla facilisi. Phasellus ac enim elit. Cras at lobortis dui. Nunc consequat erat lacus, a volutpat nisi sodales vitae. Phasellus pharetra at nulla in egestas. Vestibulum sit amet tortor sit amet diam placerat tincidunt sit amet eget lorem. Phasellus ...

  • 868 Turk St

    868 Turk St

    Nulla facilisi. Phasellus ac enim elit. Cras at lobortis dui. Nunc consequat erat lacus, a volutpat nisi sodales vitae. Phasellus pharetra at nulla in egestas. Vestibulum sit amet tortor sit amet diam placerat tincidunt sit amet eget lorem. Phasellus posuere posuere fel...

  • 420 Fell St

    420 Fell St

    Sed at vehicula magna, sed vulputate ipsum. Maecenas fringilla, leo et auctor consequat, lacus nulla iaculis eros, at ultrices erat libero quis ante. Praesent in neque est. Cras quis ultricies nisi, vitae laoreet nisi. Nunc a orci at velit sodales mollis ac ac ipsum. Na...

Feature Top (Full Width)

ಆತ್ಮೀಯ ಸ್ನೇಹಿತರೆ ಮುಂಬರುವ TET ಪರೀಕ್ಷೆಗಳಿಗೆ ನೋಟ್ಸ್, ಮಾದರಿ ಪ್ರಶ್ನೆ ಪತ್ರಿಕೆ ನೀಡಲಾಗುವುದು

Latest Updates

ಕಂಪ್ಯೂಟರ್‌ನ ಇತಿಹಾಸ ಮತ್ತು ತಲೆಮಾರುಗಳು | Computer History in Kannada

 


ಕಂಪ್ಯೂಟರ್ ಇಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇವತ್ತು ನಾವು ಬಳಸುತ್ತಿರುವ ಆಧುನಿಕ ಕಂಪ್ಯೂಟರ್‌ಗಳು ಹೀಗೆ ತಕ್ಷಣ ಬಂದಿಲ್ಲ. ಹಲವು ವರ್ಷಗಳ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ,ಮಾಡುತ್ತಾ ಮೂಲಕ ಬಂದಿದೆ ಹಾಗೂ ಅನೇಕ ವಿಜ್ಞಾನಿಗಳ ಪರಿಶ್ರಮದಿಂದ ಹಂತ ಹಂತವಾಗಿ ಇಂದಿನ ಮಟ್ಟಕ್ಕೆ ಬಂದಿವೆ. ಕಂಪ್ಯೂಟರ್‌ನ ಬೆಳವಣಿಗೆಯನ್ನು ತಲೆಮಾರುಗಳು (Generations) ಎಂದು ವಿಭಾಗಿಸಲಾಗಿದೆ. ಪ್ರತಿ ತಲೆಮಾರಿಗೂ ಅದರದೇ ಆದ ವಿಶೇಷತೆಗಳು ಮತ್ತು ತಂತ್ರಜ್ಞಾನಗಳಿವೆ.

1. ಪ್ರಥಮ ತಲೆಮಾರಿ (1940–1956) – ವ್ಯಾಕ್ಯೂಮ್ ಟ್ಯೂಬ್ ಆಧಾರಿತ

- ತಂತ್ರಜ್ಞಾನ: ವ್ಯಾಕ್ಯೂಮ್ ಟ್ಯೂಬ್‌ಗಳು ಉಪಯೋಗ.

- ಗಾತ್ರ: ಬಹಳ ದೊಡ್ಡದು, ಒಂದು ಕೋಣೆಯಷ್ಟಿತ್ತು.

- ವೇಗ: ನಿಧಾನ, ತಾಪಮಾನ ಹೆಚ್ಚಾಗುತ್ತಿತ್ತು.

- ಉದಾಹರಣೆ: ENIAC, UNIVAC.

- ಉಪಯೋಗ: ಸೇನಾ ಲೆಕ್ಕಾಚಾರ, ವೈಜ್ಞಾನಿಕ ಗಣನೆ.

2. ದ್ವಿತೀಯ ತಲೆಮಾರಿ (1956–1963) – ಟ್ರಾನ್ಸಿಸ್ಟರ್ ಆಧಾರಿತ

- ತಂತ್ರಜ್ಞಾನ: ಟ್ರಾನ್ಸಿಸ್ಟರ್‌ಗಳು ಬಳಕೆ.

- ಗಾತ್ರ: ಚಿಕ್ಕದಾಯಿತು, ವಿದ್ಯುತ್ ವ್ಯಯ ಕಡಿಮೆಯಾಯಿತು.

- ವೇಗ: ವೇಗ ಹೆಚ್ಚಾಯಿತು, ತಾಪಮಾನ ಕಡಿಮೆ.

- ಉದಾಹರಣೆ: IBM 1401, CDC 1604.

- ಉಪಯೋಗ: ಬ್ಯಾಂಕಿಂಗ್, ಉದ್ಯಮ, ಸರ್ಕಾರಿ ಕಚೇರಿಗಳು.

3. ತೃತೀಯ ತಲೆಮಾರಿ (1964–1971) – ಇಂಟಿಗ್ರೇಟೆಡ್ ಸರ್ಕ್ಯೂಟ್ (IC) ಆಧಾರಿತ

- ತಂತ್ರಜ್ಞಾನ: IC ಚಿಪ್‌ಗಳು ಬಳಕೆ.

- ಗಾತ್ರ: ಇನ್ನೂ ಚಿಕ್ಕದಾಯಿತು, ಸಾಮರ್ಥ್ಯ ಹೆಚ್ಚಾಯಿತು.

- ವೇಗ: ಸಾವಿರಾರು ಲೆಕ್ಕಾಚಾರಗಳನ್ನು ಪ್ರತಿ ಸೆಕೆಂಡ್ ಮಾಡಬಲ್ಲದು.

- ಉದಾಹರಣೆ: IBM 360 Series.

- ಉಪಯೋಗ: ಸಂಶೋಧನೆ, ಶಿಕ್ಷಣ, ವ್ಯಾಪಾರ.

4. ಚತುರ್ಥ ತಲೆಮಾರಿ (1971–1980) – ಮೈಕ್ರೋಪ್ರೊಸೆಸರ್ ಆಧಾರಿತ

- ತಂತ್ರಜ್ಞಾನ: ಮೈಕ್ರೋಪ್ರೊಸೆಸರ್‌ಗಳು ಬಳಕೆ.

- ಗಾತ್ರ: ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ರೂಪದಲ್ಲಿ.

- ವೇಗ: ಬಹಳ ವೇಗ, ಕಡಿಮೆ ವೆಚ್ಚ.

- ಉದಾಹರಣೆ: Apple II, IBM PC.

- ಉಪಯೋಗ: ಕಚೇರಿ, ಮನೆ, ಶಾಲೆಗಳಲ್ಲಿ ವ್ಯಾಪಕ ಬಳಕೆ.

    
5. ಪಂಚಮ ತಲೆಮಾರಿ (1980ರಿಂದ ಇಂದಿನವರೆಗೂ) – ಕೃತಕ ಬುದ್ಧಿಮತ್ತೆ ಆಧಾರಿತ

- ತಂತ್ರಜ್ಞಾನ: Artificial Intelligence (AI), Machine Learning, Quantum Computing.

- ವೇಗ: ಅತ್ಯಂತ ವೇಗ, ಹೆಚ್ಚಿನ ಸಂಗ್ರಹ ಸಾಮರ್ಥ್ಯ.

- ಉದಾಹರಣೆ: Supercomputers, AI-based Systems.

- ಉಪಯೋಗ: ಸ್ವಯಂ ಚಾಲಿತ ವಾಹನ, ಭಾಷಾಂತರ, ಆರೋಗ್ಯ ಕ್ಷೇತ್ರ, ಬಾಹ್ಯಾಕಾಶ ಸಂಶೋಧನೆ.

ಕೊನೆಮಾತು :

ಕಂಪ್ಯೂಟರ್‌ನ ಇತಿಹಾಸ ನಮಗೆ ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತದೆ ಎಂಬುದನ್ನು ತೋರಿಸುತ್ತದೆ. ವ್ಯಾಕ್ಯೂಮ್ ಟ್ಯೂಬ್‌ನಿಂದ ಪ್ರಾರಂಭವಾದ ಕಂಪ್ಯೂಟರ್‌ಗಳು ಇಂದು ಕೃತಕ ಬುದ್ಧಿಮತ್ತೆಯ ಹಂತ ತಲುಪಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನವೀನತೆಗಳನ್ನು ನಾವು ಕಾಣುವ ಸಾಧ್ಯತೆ ಇದೆ.

ಕಂಪ್ಯೂಟರ್ – ಅರ್ಥ, ಇತಿಹಾಸ, ಭಾಗಗಳು ಮತ್ತು ಉಪಯೋಗಗಳು | Computer in Kannada

 


ಕಂಪ್ಯೂಟರ್ (Computer) ಎಂಬ ಪದವು ಇಂಗ್ಲಿಷ್‌ನ Compute ಎಂಬ ಪದದಿಂದ ಬಂದಿದೆ. Compute ಅಂದರೆ ಲೆಕ್ಕ ಹಾಕುವುದು. ಹೀಗಾಗಿ, ಕಂಪ್ಯೂಟರ್ ಎಂದರೆ ಲೆಕ್ಕ ಹಾಕುವ ಯಂತ್ರ ಎಂದು ಅರ್ಥೈಸಬಹುದು. ಆದರೆ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಕೇವಲ ಲೆಕ್ಕ ಹಾಕುವುದಲ್ಲದೆ, ಡೇಟಾ ಸಂಗ್ರಹಿಸುವುದು, ಪ್ರಕ್ರಿಯೆಗೊಳಿಸುವುದು, ವಿಶ್ಲೇಷಿಸುವುದು, ಮಾಹಿತಿ ನೀಡುವುದು, ವಿನ್ಯಾಸ ರಚಿಸುವುದು, ಸಂವಹನ ನಡೆಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ವೇಗವಾಗಿ, ನಿಖರವಾಗಿ ನೆರವೇರಿಸುತ್ತದೆ.

ಕಂಪ್ಯೂಟರ್ ಒಂದು ಎಲೆಕ್ಟ್ರಾನಿಕ್ ಸಾಧನ. ಇದು ವಿದ್ಯುತ್ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ. ಇದು GIGO (Garbage In – Garbage Out) ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಅಂದರೆ ನೀವು ಸರಿಯಾದ ಮಾಹಿತಿ ನೀಡಿದರೆ ಸರಿಯಾದ ಫಲಿತಾಂಶ ನೀಡುತ್ತದೆ, ತಪ್ಪಾದ ಮಾಹಿತಿ ನೀಡಿದರೆ ತಪ್ಪಾದ ಫಲಿತಾಂಶ ನೀಡುತ್ತದೆ.

ಸರಳ ಅರ್ಥದಲ್ಲಿ :

ಕಂಪ್ಯೂಟರ ಎಂದರೆ ಸರಳ ಮತ್ತು ನಿಖರವಾಗಿ ಮಾಹಿತಿಯನ್ನು ಒದಗಿಸುವುದೇ ಕಂಪ್ಯೂಟರ್ ಅಥವಾ ಗಣಕಯಂತ್ರ ಎನ್ನುವರು ಉದಾಹರಣೆ : 2+1=3 

ಈ ರೀತಿಯಾಗಿ ಸರಳವಾಗಿ ಮಾಹಿತಿಯನ್ನು ನೀಡಿವುದೇ ಕಂಪ್ಯೂಟರ.

ಕಂಪ್ಯೂಟರ್‌ನ ಪ್ರಮುಖ ಲಕ್ಷಣಗಳು:

1. ವೇಗ (Speed): ಅತ್ಯಂತ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯ.

2. ನಿಖರತೆ (Accuracy): ತಪ್ಪಿಲ್ಲದ ಲೆಕ್ಕಾಚಾರ ಮತ್ತು ಪ್ರಕ್ರಿಯೆ.

3. ಸಂಗ್ರಹ ಸಾಮರ್ಥ್ಯ (Storage Capacity): ಬಹಳ ಪ್ರಮಾಣದ ಡೇಟಾ ಸಂಗ್ರಹಿಸಬಹುದು.

4. ಬಹುಕಾರ್ಯ ನಿರ್ವಹಣೆ (Multitasking): ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡಬಹುದು.

5. ಸ್ವಯಂಚಾಲಿತ ಕಾರ್ಯ (Automation): ಪ್ರೋಗ್ರಾಮ್ ಪ್ರಕಾರ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ.

ಕಂಪ್ಯೂಟರ್‌ಗಳ ಇತಿಹಾಸ:

1. ಪ್ರಥಮ ತಲೆಮಾರಿ (1940–1956): ವ್ಯಾಕ್ಯೂಮ್ ಟ್ಯೂಬ್ ಆಧಾರಿತ.

2. ದ್ವಿತೀಯ ತಲೆಮಾರಿ (1956–1963): ಟ್ರಾನ್ಸಿಸ್ಟರ್ ಆಧಾರಿತ.

3. ತೃತೀಯ ತಲೆಮಾರಿ (1964–1971): ಇಂಟಿಗ್ರೇಟೆಡ್ ಸರ್ಕ್ಯೂಟ್ ಆಧಾರಿತ.

4. ಚತುರ್ಥ ತಲೆಮಾರಿ (1971–1980): ಮೈಕ್ರೋಪ್ರೊಸೆಸರ್ ಆಧಾರಿತ.

5. ಪಂಚಮ ತಲೆಮಾರಿ (1980ರಿಂದ ಇಂದಿನವರೆಗೂ): ಕೃತಕ ಬುದ್ಧಿಮತ್ತೆ ಆಧಾರಿತ.

ಕಂಪ್ಯೂಟರ್‌ನ ಭಾಗಗಳು:

1. ಹಾರ್ಡ್‌ವೇರ್ (Hardware): ಇನ್‌ಪುಟ್ ಸಾಧನಗಳು, ಔಟ್‌ಪುಟ್ ಸಾಧನಗಳು, CPU.

2. ಸಾಫ್ಟ್‌ವೇರ್ (Software): ಸಿಸ್ಟಮ್ ಸಾಫ್ಟ್‌ವೇರ್, ಅಪ್ಲಿಕೇಶನ್ ಸಾಫ್ಟ್‌ವೇರ್.

ಕಂಪ್ಯೂಟರ್‌ಗಳ ಪ್ರಕಾರ:

1. ಸೂಪರ್ ಕಂಪ್ಯೂಟರ್‌ಗಳು.

2. ಮೇನ್‌ಫ್ರೇಮ್ ಕಂಪ್ಯೂಟರ್‌ಗಳು.

3. ಮಿನಿ ಕಂಪ್ಯೂಟರ್‌ಗಳು.

4. ಮೈಕ್ರೋ ಕಂಪ್ಯೂಟರ್‌ಗಳು.

ಉಪಯೋಗಗಳು:

- ಶಿಕ್ಷಣ ರಂಗದಲ್ಲಿ ಉಪಯೋಗ 

- ವಿಜ್ಞಾನ ಮತ್ತು ಸಂಶೋಧನೆ ಕೇಂದ್ರದಲ್ಲಿ ಉಪಯೋಗ 

- ಆರ್ಥಿಕ ವ್ಯವಹಾರಗಳು ರಂಗದಲ್ಲಿ ಉಪಯೋಗ 

- ವ್ಯಾಪಾರ ದಲ್ಲಿಯೂ ಉಪಯೋಗ 

- ಮನರಂಜನೆ ರಂಗದಲ್ಲಿ ಕೂಡ ಉಪಯೋಗ 

ಸಮಾರೂಪ :

ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಸರಿಯಾದ ಜ್ಞಾನದಿಂದ ನಾವು ಅದನ್ನು ಸಮರ್ಥವಾಗಿ ಬಳಸಬಹುದು.

 ನೆಸ್ಟ್ ಅವಧಿಯಲ್ಲಿ ನಾವು ಕಂಪ್ಯೂಟರ್ ಪೀಳಿಗೆಗಳ ಸಂಪೂರ್ಣ ವಿವರಣೆ ನೋಡಣ 

ಇದರಲ್ಲಿ ಏನಾದರು ತೊಂದರೆ ಪ್ರಶ್ನೆ ಇದ್ದರೆ ಜಿಮೈಲ್ ಮೂಲಕ ಫಾಲೋ ಮಾಡಿ ಕಾಮೆಂಟ್ ಮಾಡಿ.

ಸಾಧನಾ ಪರೀಕ್ಷೆ – ಅರ್ಥ, ಉದ್ದೇಶ, ಪ್ರಕಾರಗಳು ಮತ್ತು TET ಸಂಬಂಧಿತ ಮಾಹಿತಿ

 


ಆತ್ಮೀಯ ಸ್ನೇಹಿತರೆ…..

ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಯ ವಿದ್ಯಾಭ್ಯಾಸದ ಮಟ್ಟ, ತಿಳುವಳಿಕೆ, ಕೌಶಲ್ಯ ಹಾಗೂ ಕಲಿತ ವಿಷಯದ ಅಳವಡಿಕೆಯನ್ನು ಅಳೆಯುವ ಪ್ರಮುಖ ಸಾಧನವೆಂದರೆ ಸಾಧನಾ ಪರೀಕ್ಷೆ. ಇವುಗಳನ್ನು ಇಂಗ್ಲಿಷ್‌ನಲ್ಲಿ Achievement Test ಎಂದು ಕರೆಯಲಾಗುತ್ತದೆ.

ಮನೋವಿಜ್ಞಾನದಲ್ಲಿ ಸಾಧನಾ ಪರೀಕ್ಷೆಯು, ಕಲಿಕೆಯ ನಂತರ ವಿದ್ಯಾರ್ಥಿ ಎಷ್ಟು ಮಟ್ಟಿಗೆ ಗುರಿ ತಲುಪಿದ್ದಾನೆ ಎಂಬುದನ್ನು ಅಳೆಯುವ ಪ್ರಕ್ರಿಯೆ.

TET (Teacher Eligibility Test) ನಲ್ಲಿ ಸಹ ಈ ಪರಿಕಲ್ಪನೆ ಪ್ರಮುಖವಾಗಿದೆ, ಏಕೆಂದರೆ ಶಿಕ್ಷಕರಾಗಿ ಕೆಲಸ ಮಾಡುವವರು ವಿದ್ಯಾರ್ಥಿಗಳ ಸಾಧನೆಯನ್ನು ಅಳೆಯುವ ವಿಧಾನಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

1. ಸಾಧನಾ ಪರೀಕ್ಷೆಯ ಅರ್ಥ:

‘ಸಾಧನೆ’ ಎಂಬ ಪದದ ಅರ್ಥ — ಯಾವುದೋ ಗುರಿಯನ್ನು ತಲುಪುವುದು.

‘ಪರೀಕ್ಷೆ’ ಎಂದರೆ ಮೌಲ್ಯಮಾಪನ ವಿಧಾನ.

ಹೀಗಾಗಿ ಸಾಧನಾ ಪರೀಕ್ಷೆ ಎಂದರೆ – ಕಲಿಕೆಯ ನಂತರ ವಿದ್ಯಾರ್ಥಿಯು ನಿರ್ದಿಷ್ಟ ವಿಷಯದಲ್ಲಿ ಸಾಧಿಸಿದ ಮಟ್ಟವನ್ನು ಪರೀಕ್ಷಿಸುವ ವಿಧಾನವಾಗಿದೆ.


2. ಸಾಧನಾ ಪರೀಕ್ಷೆಯ ಉದ್ದೇಶ:

- ವಿದ್ಯಾರ್ಥಿಯ ಕಲಿಕೆಯ ಮಟ್ಟವನ್ನು ಪತ್ತೆಹಚ್ಚುವುದು

- ಅವನ ಬಲ ಹಾಗೂ ದುರ್ಬಲತೆಯನ್ನು ಗುರುತಿಸುವುದು

- ಮುಂದಿನ ಬೋಧನೆಗೆ ಮಾರ್ಗದರ್ಶನ ನೀಡುವುದು

- ವಿದ್ಯಾರ್ಥಿ ನಿರ್ದಿಷ್ಟ ಗುರಿ ತಲುಪಿದನಾ ಎಂದು ಪರಿಶೀಲಿಸುವುದು

- ಅಧ್ಯಾಪಕರ ಬೋಧನಾ ಫಲಿತಾಂಶವನ್ನು ಮೌಲ್ಯಮಾಪನ ಮಾಡುವುದು

3. ಸಾಧನಾ ಪರೀಕ್ಷೆಯ ಲಕ್ಷಣಗಳು:

- ಗುರಿ ಆಧಾರಿತ – ನಿರ್ದಿಷ್ಟ ಪಾಠ ಅಥವಾ ಕೋರ್ಸ್ ಗುರಿ ತಲುಪಿದೆಯೇ ಎಂದು ಪರೀಕ್ಷಿಸುತ್ತದೆ.

- ಪಾಠಕ್ರಮಕ್ಕೆ ಸಂಬಂಧಿತ – ಕಲಿಸಿದ ಪಾಠದಿಂದಲೇ ಪ್ರಶ್ನೆಗಳು ಬರುತ್ತವೆ.

- ನಿಯಮಿತ ಅವಧಿ – ಪಾಠದ ಅಂತ್ಯದಲ್ಲಿ ಅಥವಾ ಅಧ್ಯಾಯದ ನಂತರ ನಡೆಸಲಾಗುತ್ತದೆ.

- ವಿಷಯಾಧಾರಿತ – ವಿಷಯದ ಜ್ಞಾನ, ಕೌಶಲ್ಯ ಹಾಗೂ ಅನ್ವಯಿಕತೆಗೆ ಒತ್ತು.

- ಮಾನಸಿಕ ಅಂಶ – ವಿದ್ಯಾರ್ಥಿಯ ಮನೋವಿಜ್ಞಾನ, ಆಸಕ್ತಿ, ಪ್ರೇರಣೆಗಳಿಗೂ ಸಂಬಂಧ.

4. ಸಾಧನಾ ಪರೀಕ್ಷೆಯ ಪ್ರಕಾರಗಳು:

- ಪ್ರಾಮಾಣಿಕೃತ ಪರೀಕ್ಷೆ (Standard Test)

- ಶಿಕ್ಷಕ ನಿರ್ಮಿತ ಪರೀಕ್ಷೆ (Teacher made Test)

5. ವಸ್ತುನಿಷ್ಠ ಪ್ರಶ್ನೆಗಳು (Objective Type):

  • ಬಹು ಆಯ್ಕೆ ಪ್ರಶ್ನೆ 
  • ಸರಿ ತಪ್ಪು 
  • ಹೊಂದಿಸಿ ಬರೆಯಿರಿ 
  • ಬಿಟ್ಟ ಸ್ಥಳ ತುಂಬಿರಿ 
  • ಕ್ರಮ ಜೋಡಣೆ 

6. ವಿಷಯ ನಿಷ್ಠ ಪ್ರಶ್ನೆ(Subjective Test) :

  1. ಮೌಖಿಕ (Orel)
  2. ಲಘು ಮಾದರಿ (Short Answer )
  3. ಪ್ರಬಂಧ ಮಾದರಿ (Essay)

7. TET ಸಂಬಂಧ

TET ಪರೀಕ್ಷೆಯಲ್ಲಿ ಶೈಕ್ಷಣಿಕ ಮನೋವಿಜ್ಞಾನ ವಿಭಾಗದಲ್ಲಿ ಸಾಧನಾ ಪರೀಕ್ಷೆಯ ಕುರಿತ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಲಾಗುತ್ತವೆ.

8. ಸಾಧನಾ ಪರೀಕ್ಷೆಯ ಮಹತ್ವ:

- ವಿದ್ಯಾರ್ಥಿ ಮೌಲ್ಯಮಾಪನ

- ಪಠ್ಯಕ್ರಮದ ಪರಿಣಾಮಕಾರಿತ್ವ

- ಬೋಧನಾ ವಿಧಾನ ಸುಧಾರಣೆ

- ವಿದ್ಯಾರ್ಥಿ ಪ್ರೇರಣೆ

9. ಸಮಾರೋಪ:

ಸಾಧನಾ ಪರೀಕ್ಷೆ ವಿದ್ಯಾರ್ಥಿಯ ಕಲಿಕೆ ಮಟ್ಟವನ್ನು ತಿಳಿಯಲು ಹಾಗೂ ಮುಂದಿನ ಬೋಧನೆಗೆ ಮಾರ್ಗದರ್ಶನ ನೀಡಲು ಅತ್ಯಂತ ಮುಖ್ಯವಾದುದು. ಶಿಕ್ಷಕರಾಗಿ, ವಿದ್ಯಾರ್ಥಿಯ ಬಲ–ದುರ್ಬಲತೆಗಳನ್ನು ಗುರುತಿಸಿ, ಬೋಧನೆಯನ್ನು ಸುಧಾರಿಸಲು ಇದು ಸಹಾಯಕ.

ಇದರಲ್ಲಿ ಏನಾದರು ತಪ್ಪು ಮಾಹಿತಿ ಇದ್ದರೆ ಕಾಮೆಟ್ ಮೂಲಕ ತಿಳಿಸಿ ಹಾಗೆ ಈ ಪೇಜ್ ಜಿಮೈಲ್ ಮೂಲಕ ಫಾಲೋ ಆಗಿ ಇದೆ ರೀತಿ TET NOTES, Quiz, Question paper ಗಾಗಿ ಗೂಗಲ್ ನಲ್ಲಿ harivuhabba ಅಂತ ಟೈಪ್ ಮಾಡಿ ದಿನನಿತ್ಯ ನೋಟ್ಸ್ ನಿಮ್ಮದಾಗಿಸಿಕೊಳ್ಳಿ.




ನವೋದಯ ವಿದ್ಯಾಲಯ ಪ್ರವೇಶ ಅರ್ಜಿ 2025 – ಅರ್ಜಿ ಹಾಕೋದು ಹೇಗೆ? ಯಾವ ಡಾಕ್ಯುಮೆಂಟ್ ಬೇಕು?

 


ನಮಸ್ಕಾರ ಸ್ನೇಹಿತರೆ,

ಮಕ್ಕಳ ಭವಿಷ್ಯದ ಮುಂದೆ ಯಾವ ಭವಿಷ್ಯ ವಿಲ್ಲಾ ಎಂಬ ಮಾತಿನಂತೆ  ಈಗಾ ಕರ್ನಾಟಕ ಸರಕಾರ ತಿಳಿಸುವುದೇನೆಂದರೆ  ಯಾರೆಲ್ಲ 5 ನೇ ತರಗತಿ ನವೋದಯ ಪರೀಕ್ಷೆ ಬರಿದಿರೋ ಅವರೆಲ್ರಿಗೂ ಒಂದು ಉಚಿತ ಅವಕಾಶ ಕೊಟ್ಟಿದೆ ಅದುವೇ 6 ತರಗತೆಗೆ ಅರ್ಜಿ ಸಲ್ಲಿಸುವ ಅವಕಾಶ ನವೋದಯ ವಿದ್ಯಾಲಯ ಕೇಂದ್ರಕ್ಕೆ. ಎಲ್ಲರಿಗೂ ಚಿಂತೆಯೇ ಇರತ್ತೆ. ಈಗ ನವೋದಯ ವಿದ್ಯಾಲಯ (Jawahar Navodaya Vidyalaya) 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕೋ ಅವಕಾಶ ಬಂದಿದೆ. ನೀವನ್ನೂ ಈಗಲೇ ಮಕ್ಕಳ ಭವಿಷ್ಯಕ್ಕಾಗಿ ಜಾಗರೂಕರಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಅರ್ಜಿಗೆ ಕೊನೆ ದಿನಾಂಕ:

ಈ ಅರ್ಜಿ ಹಾಕೋಕೆ ಕೊನೆ ದಿನಾಂಕ 29-07-2025 ಅಂತಾ ತಿಳಿಸಿರೋದು. ಆದ್ದರಿಂದ ಸಮಯ ಮೀರಿದ ಮೇಲೆ ಅರ್ಜಿ ಹಾಕೋಕೆ ಬರಲ್ಲ ಈಗಲೇ ಅರ್ಜಿ ಹಾಕಿ ಬಿಡಿ.

ಅರ್ಜಿಯನ್ನು ಹೇಗೆ ಹಾಕೋದೂ ತಿಳ್ಕೊಳ್ಳಿ:

ಆನ್ಲೈನ್ ಮೂಲಕ ಅರ್ಜಿ ಹಾಕಬೇಕಾಗುತ್ತದೆ.

Navodaya ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ:

👉 https://navodaya.gov.in

ಅಲ್ಲಿನ “Class 6 Admission” ಅಥವಾ “JNVST 2025” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಬಳಸಿ ರಜಿಸ್ಟ್ರೇಷನ್ ಮಾಡಿ.

ನಂತರ ಫಾರ್ಮ್‌ನಲ್ಲಿ ಮಕ್ಕಳ ಹೆಸರು, ತಂದೆ-ತಾಯಿಯ ಹೆಸರು, ಶಾಲೆಯ ವಿವರ, ವಿಳಾಸ ಇವೆಲ್ಲಾ ಸರಿಯಾಗಿ ತುಂಬಿ ಕೊಡಿ.

ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು (ಕೆಳಗೆ ವಿವರ ಇದೆ).

ಕೊನೆಗೆ “Submit” ಮಾಡಿದ್ಮೆಲೆ ಆಪ್ಲಿಕೇಶನ್ ಸಂಖ್ಯೆಯನ್ನು ಉಳಿಸಿಟ್ಟುಕೊಳ್ಳಿ. ಇದು ಹಳೆಯ ದಿನಗಳಲ್ಲಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡೋದಕ್ಕೆ ಬೇಕಾಗತ್ತೆ.

ಅರ್ಜಿಗೆ ಬೇಕಾಗುವ ಡಾಕ್ಯುಮೆಂಟ್ಸ್ (ಅವಶ್ಯಕ ದಾಖಲೆಗಳು):

  1. ಜನ್ಮ ಪ್ರಮಾಣಪತ್ರ (Birth Certificate):
  2. ವಿದ್ಯಾರ್ಥಿಯ ಭಾವಚಿತ್ರ.
  3. ವಿದ್ಯರ್ಥಿಯ & ಪಾಲಕರ ಸಹಿ.
  4. ಆಧಾರ್ ಕಾರ್ಡ್.
  5. ವಾಸಸ್ಥಳ ಪ್ರಮಾಣ ಪಾತ್ರ (ಅಗತ್ಯವಿದ್ದರೆ ಮಾತ್ರ,)
  6. ಎಸ್‌ಸಿ / ಎಸ್‌ಟಿ / ಓಬಿಸಿ / ಇಬಿಸಿ ವರ್ಗಕ್ಕೆ ಸೇರಿದವರಾದರೆ, ಆ ವರ್ಗದ ಪ್ರಮಾಣಪತ್ರವನ್ನು ಹಾಕಬೇಕು.
  7. ನೀವು ಯಾವ ಜಿಲ್ಲೆ ಮತ್ತು ತಾಲೂಕಿನಲ್ಲಿ ವಾಸಿಸುತ್ತೀರೋ, ಅದರ ಸಾಬೀತು.
  8. ಮಕ್ಕಳಿಗೆ ಪ್ರಸ್ತುತ 5ನೇ ತರಗತಿಯಲ್ಲಿ ಅಭ್ಯಾಸ ನಡೆಯುತ್ತಿರುವ ಶಾಲೆಯಿಂದ ಅರ್ಹತಾ ಪ್ರಮಾಣಪತ್ರ.
  9. ಪಾಸ್ಪೋರ್ಟ್ ಸೈಜ್ ಫೋಟೋ:
  10. ಜಾತಿ ಪ್ರಮಾಣ ಪಾತ್ರ.
  11. ಕಲರ್ ಫೋಟೋ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  12. ಮಕ್ಕಳ ಸಹಿ ಅಥವಾ ಪೋಷಕರ ಸಹಿ ಸ್ಕ್ಯಾನ್ ಮಾಡಿ ಹಾಕಬೇಕು.

ಪ್ರವೇಶ ಪರೀಕ್ಷೆ ಯಾವಾಗ?:

ಪರೀಕ್ಷೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ, ಆದರೆ ಸಾಮಾನ್ಯವಾಗಿ ಇದು ಫೆಬ್ರವರಿ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತೆ. ಸಮಯಕ್ಕೆ ಸಿದ್ಧತೆ ಮಾಡೋಕೆ ಈಗಲೇ ಪ್ಲಾನ್ ಮಾಡೋಣ.

ಕೊನೆ ಮಾತು:

ನವೋದಯ ಶಾಲೆಗಳಲ್ಲಿ ಉಚಿತ ವಿದ್ಯಾಭ್ಯಾಸ, ವಸತಿ, ಊಟ ಮತ್ತು ಎಲ್ಲಾ ತರಗತಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತೆ. ಗ್ರಾಮೀಣ ಮಕ್ಕಳು ದೊಡ್ಡ ಮಟ್ಟದ ಅವಕಾಶಗಳನ್ನು ತಲುಪೋದು ಇಂಥ ಪರೀಕ್ಷೆಗಳ ಮೂಲಕ ಸಾಧ್ಯ. ಆದ್ದರಿಂದ, ನಿಮ್ಮ ಮಗುವಿಗೆ ಉತ್ತಮ ಭವಿಷ್ಯ ರೂಪಿಸಲು ಈ ಅರ್ಜಿ ಹಾಕಿ ಬಿಡಿ, ಒಂದು ಬಾರಿ ಪ್ರಯತ್ನ ಕೊಡಿ.

ನಿಮ್ಮ ಬಾಲಕ/ಬಾಲಕಿ ನವೋದಯ ಶಾಲೆಯಲ್ಲಿ ಸೇರುವದಕ್ಕೂ, ಜೀವನದಲ್ಲಿ ಬೆಳೆಯೋದಕ್ಕೂ ನಮ್ಮ ಹಾರೈಕೆಗಳು.

ಇದೇ ರೀತಿಯ ಮಾಹಿತಿಗಾಗಿ ನನ್ನ ಬ್ಲಾಗನ್ನು ನೋಡ್ತಾ ಇರಿ: harivuhabba.blogspot.com 

ಇದರಲ್ಲಿ ಏನಾದರು ಸಮಸ್ಯೆ ವಿದ್ದರೆ ಕಾಮೆಂಟ್ ಮೂಲಕ ತಿಳಿಸಿ.

ಈಗೆ ಹಲವು ವಿಷಯಗ ಮಾಹಿತಿ ಬೇಕಾದರೆ ಈ ಪೇಜ್ ಫಾಲೋ ಮಾಡಿ ಜಿಮೈಲ್ ಮೂಲಕ 
























TET ಹೊಸ ಪಠ್ಯಕ್ರಮ 2025–26: ಸಂಪೂರ್ಣ ಮಾರ್ಗದರ್ಶನ ಮತ್ತು ತಯಾರಿ ಸಲಹೆಗಳು"



ಆತ್ಮೀಯ ಸ್ನೇಹಿತರೆ, ಈಗ ನಿಮ್ಮ ಪಾಠಗಳು ಹೆಚ್ಚು ಚೆಂದವಾಗಿದೆ. ನಿಜವಾದ ಜೀವನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ . ಹೊಸ ಪಾಠಕ್ರಮ ನಿಮಗೆ ಪುಸ್ತಕದ ಜ್ಞಾನವಷ್ಟೆ ಅಲ್ಲ, ಬದುಕಿನಲ್ಲಿ ಉತ್ತಮ ವ್ಯಕ್ತಿಯಾಗಲು ಸಹ ಮಾರ್ಗ ತೋರಿಸುವ ಏಕೈಕ ವೆಬ್ಸೈಟ್ ವಾಗಿದೆ. ಓದೋದು ಕೇವಲ ಅಂಕಗಳಿಗೆಲ್ಲ ಅಲ್ಲ – ನಾವು ಹೇಗೆ ಯೋಚಿಸಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಲು ಈ ಹೊಸ ಪಾಠಗಳು ಸಹಾಯ ಮಾಡುತ್ತವೆ. ನಿಮಗೆ ಇಷ್ಟವಾಗುವ ವಿಷಯಗಳಲ್ಲಿ ಹೊಸ ಹೊಸ ಕಲಿಕೆಗಳು ಇದೆ. ಹೀಗಾಗಿ, ಪ್ರತಿ ಪಾಠವನ್ನು ಉತ್ಸಾಹದಿಂದ ಓದಿ, ಪ್ರಶ್ನೆ ಮಾಡಿ, ಕಲಿತು ಬೆಳೆದು, ಒಳ್ಳೆಯ ಪ್ರಜೆಯಾಗಿ ಹೊರಹೊಮ್ಮಿ." ಎಂದು ಆರೈಸುತ್ತೇನೆ.

2025-26ರ TET ಹೊಸ ಪಠ್ಯಕ್ರಮ – ಸಂಪೂರ್ಣ ಮಾಹಿತಿ

ಕರ್ನಾಟಕ ರಾಜ್ಯದ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಯಲ್ಲಿ ಹೊಸದಾಗಿ ರೂಪುಗೊಂಡಿರುವ ಪಠ್ಯಕ್ರಮ 2025-26ರ ಅವಧಿಗೆ ಅನೇಕ ಬದಲಾವಣೆಗಳನ್ನು ಹೊಂದಿದೆ. ಈ ಬದಲಾವಣೆಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ರೂಪುಗೊಂಡಿದ್ದು, ಅಭ್ಯರ್ಥಿಗಳು ಹೊಸ syllbus ಪ್ರಕಾರ ತಯಾರಿ ಮಾಡಿಕೊಳ್ಳುವುದು ಅಗತ್ಯವಾಗಿದೆ.

🔹 ಹೊಸ ಪಠ್ಯಕ್ರಮದ ಹಿನ್ನಲೆ:

ಪೂರ್ವ ಪಠ್ಯಕ್ರಮವು 2011 ರಿಂದ 2023ರವರೆಗೆ ಬಳಸಲ್ಪಡುತ್ತಿದ್ದು, ಹಲವಾರು ಬಾರಿ ಸುಧಾರಣೆ ಮಾಡುವ ಅಗತ್ಯವಿತ್ತು. ನವೀನ ಎನ್‌ಸಿಇಆರ್‌ಟಿ (NCERT) ಮಾರ್ಗಸೂಚಿ, NEP 2020 (ನೂತನ ಶಿಕ್ಷಣ ನೀತಿ), ಮತ್ತು ಪೌರತ್ವ ಶಿಕ್ಷಣ, ಸಮಾನತೆ, ಲಿಂಗಸಮತೆ ಮುಂತಾದ ತತ್ವಗಳನ್ನು ಒಳಗೊಂಡಂತೆ ಹೊಸ ಪಠ್ಯಕ್ರಮವನ್ನು ರೂಪಿಸಲಾಗಿದೆ. ಅದರಂತೆ ಈ ಕೆಳಗಿಂತೆ ವಿವರಿಸಲಾಗಿದೆ.

📚 ಪೇಪರ್ 1 (1 ರಿಂದ 5ನೇ ತರಗತಿ) – ಪ್ರಮುಖ ವಿಷಯಗಳು

ಪೇಪರ್ 1 ಗೆ ಅರ್ಹರಾಗಿರುವ ಅಭ್ಯರ್ಥಿಗಳು ಸಾಮಾನ್ಯವಾಗಿ ಪ್ರಾಥಮಿಕ ಶಾಲೆ ಶಿಕ್ಷಕರಾಗಲು ಅರ್ಜಿ ನೀಡುತ್ತಾರೆ. ಹೊಸ ಪಠ್ಯಕ್ರಮದ ಪ್ರಕಾರ ಪ್ರಮುಖ ವಿಷಯಗಳು ಈ ಕೆಳಗಿನಂತಿವೆ:

  • ಶೈಕ್ಷಣಿಕ ಮನೋವಿಜ್ಞಾನ ಮತ್ತು ಮಕ್ಕಳ ಬೆಳವಣಿಗೆ (CDP) – 30 ಅಂಕ
  • ಶೈಕ್ಷಣಿಕ ಉದ್ದೇಶಗಳು
  • ಕಲಿಕೆ ಶೈಲಿಗಳು
  • ಮಕ್ಕಳ ವಿವಿಧ ಮನೋವೃತ್ತಿಗಳು
  • ಭಾಷೆ – 1 (ಕನ್ನಡ) – 30 ಅಂಕ
  • ಭಾಷಾ ಕಲಿಕೆಯಲ್ಲಿ ಆಟದ ಪಾತ್ರ
  • ಭಾಷಾ ಜ್ಞಾನ ಮತ್ತು ವ್ಯಾಕರಣ
  • ಭಾಷೆ – 2 (ಇಂಗ್ಲಿಷ್) – 30 ಅಂಕ
  • Pedagogy of Language Development
  • Grammar & Comprehension
  • ಗಣಿತ – 30 ಅಂಕ
  • ಮೂಲಭೂತ ಗಣಿತ ಪರಿಕಲ್ಪನೆಗಳು
  • Arithmetic & Geometry
  • Pedagogical issues
  • ಪರಿಸರ ಅಧ್ಯಯನ (EVS) – 30 ಅಂಕ
  • ಪ್ರಕೃತಿ, ಸಮಾಜ, ವಿಜ್ಞಾನ
  • ಪರಿಸರ ಶಿಕ್ಷಣದ ಉಪಾಯಗಳು

📘 ಪೇಪರ್ 2 (6 ರಿಂದ 8ನೇ ತರಗತಿ) – ಪ್ರಮುಖ ವಿಷಯಗಳು:

ಪೇಪರ್ 2 ಅನ್ನು ಉಚ್ಚ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ರೂಪಿಸಲಾಗಿದೆ. ಇಲ್ಲಿ ಹೊಸ ಪಠ್ಯಕ್ರಮದ ಪ್ರಕಾರ ವಿಷಯಗಳ ವಿಸ್ತಾರ ಹೆಚ್ಚಿಸಲಾಗಿದೆ:

  • ಶೈಕ್ಷಣಿಕ ಮನೋವಿಜ್ಞಾನ ಮತ್ತು ಮಕ್ಕಳ ಬೆಳವಣಿಗೆ – 30 ಅಂಕ
  • ಭಾಷೆ – 1 (ಕನ್ನಡ) – 30 ಅಂಕ
  • ಭಾಷೆ – 2 (ಇಂಗ್ಲಿಷ್) – 30 ಅಂಕ
  • ವೈಷಯಿಕ ಆಯ್ಕೆ (Math/Science ಅಥವಾ Social Science) – 60 ಅಂಕ
  • ಗಣಿತ ಮತ್ತು ವಿಜ್ಞಾನ (60 ಅಂಕ):
  • ಗಣಿತ ಶಿಕ್ಷಣದ ತತ್ವಗಳು
  • ವಿಜ್ಞಾನ ತತ್ವಗಳು, ಪ್ರಯೋಗಗಳು
  • Pedagogical concerns
  • ಸಾಮಾಜಿಕ ವಿಜ್ಞಾನ (60 ಅಂಕ):
  • ಇತಿಹಾಸ, ಭೂಗೋಳ, ನಾಗರಿಕ ಶಾಸ್ತ್ರ
  • ಸಾಮಾಜಿಕ ವಿಷಯಗಳ ಅಧ್ಯಯನದ ಶೈಲಿಗಳು

🔄 ಹೊಸ ಬದಲಾವಣೆಗಳು:

💡 ಶೈಕ್ಷಣಿಕ ಮನೋವಿಜ್ಞಾನ ಭಾಗದಲ್ಲಿ NEP 2020 ಅಂಶಗಳು ಸೇರಿಸಲಾಗಿದೆ.

🧠 ಬೌದ್ಧಿಕ ಸಾಮರ್ಥ್ಯ, ಕೌಶಲ ಅಭಿವೃದ್ಧಿ ಕುರಿತು ಹೆಚ್ಚಿನ ಒತ್ತಡ.

🌍 ಪರಿಸರ, ಸಹಜಿಕ ಜೀವನಚರ್ಯೆಗಳಿಗೆ ಸಂಬಂಧಿಸಿದ ಪಾಠಗಳು ಹೆಚ್ಚಿಸಲಾಗಿದೆ.

📘 ಪಠ್ಯಗ್ರಂಥಗಳಾದ ಕಣ್ಮಣಿ, ಚಿಗುರು, ಚಿಲುಮೆ, ಹಿರಿಮುಡಿ ಇತ್ಯಾದಿಯ ಪರಿಕಲ್ಪನೆಗಳು ಸೇರಿವೆ.

✅  ಪರೀಕ್ಷೆಗೆ ತಯಾರಿ ಸಲಹೆಗಳು:

ಹೊಸ ಪಠ್ಯಕ್ರಮದ ಪ್ರಕಾರ ಪ್ರತಿ ವಿಷಯದ ಪೆಡಗಾಜಿ (Pedagogy) ಮೇಲೆ ಹೆಚ್ಚು ಒತ್ತಡವಿದೆ.

NCERT & SCERT ಪುಸ್ತಕಗಳು ಓದಿ ಅಭ್ಯಾಸ ಮಾಡಿ.

ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ model question papers ಮತ್ತು mock tests ಉಪಯೋಗಿಸಿ.

 ಕೊನೇದಾಗಿ :

ಹೊಸ ಪಠ್ಯಕ್ರಮವು ಅಭ್ಯರ್ಥಿಗಳ ಶೈಕ್ಷಣಿಕ ತಯಾರಿಗೆ ಹೊಸ ದಿಕ್ಕು ನೀಡುತ್ತದೆ. ಸರಿಯಾದ ಸಮಯದಲ್ಲಿ ಪಠ್ಯಕ್ರಮದ ಅಧ್ಯಯನ ಮತ್ತು ಅಭ್ಯಾಸದ ಮೂಲಕ TET ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು. ಈ ಬದಲಾವಣೆಗೆ ಅನುಗುಣವಾಗಿ ತಯಾರಿ ಮಾಡಿಕೊಳ್ಳಿ, ಯಶಸ್ಸು ನಿಮ್ಮದಾಗಲಿದೆ!




Feature (Side)

© 2013 HARIVU HABBA . All rights resevered. Designed by Templateism